Sunday, May 19, 2024

ಮಗಳೇ, ನಾನು ನಿನ್ನ ಮಾತು ಕೇಳುತ್ತೇನೆ ಕೆಳಗಿಳಿ : ಮೋದಿ ಮನವಿ ಬಳಿಕ ಕೆಳಗಿಳಿದ ಯುವತಿ

ಬೆಂಗಳೂರು : ತೆಲಂಗಾಣದಲ್ಲಿ ನಡೆದ ಚುನಾವಣೆಯ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಿದ್ದ ವೇಳೆ ಯುವತಿ ಹೈಡ್ರಾಮ ಸೃಷ್ಟಿಸಿದ್ದಾಳೆ.

ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಹುಡುಗಿಯೊಬ್ಬಳು ಬೆಳಕು-ಧ್ವನಿಗಾಗಿ ತಾತ್ಕಾಲಿಕವಾಗಿ ನಿರ್ಮಿಸಲಾದ ಟವರ್ ವೊಂದರ ಮೇಲೆ ಏರಿದ್ದಾಳೆ. ಆಕೆ ಈ ರೀತಿ ಮಾಡುವುದನ್ನು ನೋಡಿದ ಪ್ರಧಾನಿ ಮೋದಿ ಅವರು, ಟವರ್ ನಿಂದ ಆಕೆಯನ್ನು ಕೆಳಗಿಳಿಯುವಂತೆ ಪರಿಪರಿಯಾಗಿ ಮನವಿ ಮಾಡಿದ್ದಾರೆ.

‘ಮಗಳೇ, ನಾನು ನಿನ್ನ ಮಾತು ಕೇಳುತ್ತೇನೆ, ಕೆಳಗಿಳಿ’ ಎಂದು ಮೈಕ್ ಮೂಲಕವೇ ವಿನಂತಿಸಿದ್ದಾರೆ. ಇದು ಸರಿಯಾದ ವಿಧಾನ ಅಲ್ಲ. ಅಲ್ಲಿ ಶಾರ್ಟ್ ಸರ್ಕೀಟ್ ಆಗುವ ಸಾಧ್ಯತೆ ಇದೆ ಕೆಳಗಿಳಿ ಎಂದೂ’ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ನಾನು ಕೇವಲ ನಿಮಗೋಸ್ಕರ ಆಗಮಿಸಿದ್ದೇನೆ. ಹೀಗೆ ಮಾಡುವುದರಿಂದ ಏನೂ ಲಾಭವಾಗುವುದಿಲ್ಲ. ಅಲ್ಲಿ ತಂತಿ ಸರಿಯಾಗಿಲ್ಲ. ನೀನು ಕೃಷ್ಣಾಜಿ ಅವರ ಮಾತನ್ನು ಕೇಳಿ ಪ್ಲೀಸ್ ದಯವಿಟ್ಟು ಕೆಳಗಿಳಿದು ಬಾ’ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯರ ಮನವಿಗೆ ಕೊನೆಗೂ ಯುವತಿ ಟವರ್ ನಿಂದ ಕೆಳಗಿಳಿದಿದ್ದಾಳೆ.

ಕೆಸಿಆರ್ ವಿರುದ್ಧ ಮೋದಿ ಗುಡುಗು

ತೆಲಂಗಾಣಕ್ಕೆ ದಲಿತರೊಬ್ಬರನ್ನು ಸಿಎಂ ಮಾಡುವುದಾಗಿ ಆಂದೋಲನದ ವೇಳೆ ಭರವಸೆ ನೀಡಲಾಗಿತ್ತು. ಆದರೆ, ರಾಜ್ಯ ರಚನೆಯಾದ ನಂತರ ಕೆಸಿಆರ್ ಸಿಎಂ ಆದರು. ದಲಿತರಿಗೆ ಭೂಮಿ ಕೊಡಿಸುವುದಾಗಿ ಕೆಸಿಆರ್ ಭರವಸೆ ನೀಡಿದರು. ದಲಿತ ಬಂಧು ಯೋಜನೆ ಮೂಲಕ ಹಣ ನೀಡುವುದಾಗಿ ಕೆಸಿಆರ್ ಭರವಸೆ ನೀಡಿದ್ದಾರೆ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು. ಆದರೆ, ಯಾವುದೇ ಭರವಸೆ ಈಡೇರಿಸಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES