Thursday, May 2, 2024

ಸಹಕಾರನಗರದಲ್ಲಿ ಮಳೆ ಅವಾಂತರ : ರಸ್ತೆ ತಡೆದು ಪ್ರತಿಭಟನೆ ಮಾಡಿದ ನಿವಾಸಿಗಳು

ಬೆಂಗಳೂರು: ರಾಜಧಾನಿಯಲ್ಲಿ ಧಾರಕಾರವಾಗಿ ಸುರಿದ ಮಳೆಯಿಂದಾಗಿ ಸಹಕಾರ ನಗರ ಬಡಾವಣೆಯಲ್ಲಿ ಅನಾಹುತವನ್ನೇ ಸೃಷ್ಟಿಸಿಯಾಗಿದ್ದು,ಇದನ್ನು ಖಂಡಿಸಿ ಬಿಬಿಎಂಪಿ ವಿರುದ್ಧ ರಸ್ತೆ ತಡೆದು ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.

ಮನೆಗಳಿಗೆ ಮಳೆ ನೀರು ನುಗ್ಗಿದ್ದು, ರಸ್ತೆಗಳು ಕೆರೆಗಳಂತಾಗಿವೆ. ಮಳೆ ಸುರಿದ ಪರಿಣಾಮ ಸಹಕಾರ ನರದ ಜೆ ಬ್ಲಾಕ್‌ನ ಮನೆಗಳು, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಜಲಾವೃತವಾಗಿದವು.

ಇದರಿಂದ ನಿವಾಸಿಗಳಿಗೆ ತೊಂದರೆಯಾಗಿ ನಗರಪಾಲಿಕೆ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಪೊಲೀಸರು ಪ್ರತಿಭಟನಾನಿರತರನ್ನು ಸಮಾಧಾನ ಮಾಡಿ ವಾಪಸ್ ಕಳಿಸಿದರು. ಸ್ಥಳೀಯರ ಆಕ್ರೋಶಕ್ಕೆ ಎಚ್ಚತ್ತುಕೊಂಡ ಬಿಬಿಎಂಪಿ ಬಿಬಿಎಂಪಿ ಸಿಬ್ಬಂದಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ರಾತ್ರಿಯೇ ನೀರನ್ನು ತೆರವು ಮಾಡಿದರು.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಭೇಟೆಯಾದ ಸಂಸದ ತೇಜಸ್ವಿಸೂರ್ಯ

ಏರ್‌ಪೋರ್ಟ್ ರಸ್ತೆ ಪಕ್ಕದಲ್ಲೇ ಇರುವ ಸಹಕಾರ ನಗರ ಏರಿಯಾ ಕಳೆದೆರಡು ದಿನದಿಂದ ಮಳೆಗೆ ಜಲಾವೃತವಾಗಿ ತೊಂದರೆ ಅನುಭವಿಸುತ್ತಿದೆ. ಪ್ರತಿ ಮಳೆಗೂ ಮೋರಿ ನೀರು ಮನೆಯೊಳಗೆ ನುಗ್ಗುತ್ತಿದೆ. ಮಳೆ ನೀರಿನ ಕಾಟದಿಂದ ಬೇಸತ್ತ ಸ್ಥಳೀಯ ನಿವಾಸಿಗಳಲ್ಲಿ ಅನೇಕರು ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದಾರೆ.

ಮಾರ್ಕೆಟ್ ಹಿಂಭಾಗದ ಮನೆಗಳಿಗೂ ನೀರು ನುಗ್ಗಿತು. ಬುಧವಾರ ರಾತ್ರಿ ಕೆಲವೆಡೆ ರಸ್ತೆಯಲ್ಲಿ ಐದಾರು ಅಡಿಗಳಷ್ಟು ಮಳೆ ನೀರು ನಿಂತಿತ್ತು. ಚರಂಡಿಗಳು ಬ್ಲಾಕ್‌ ಆಗಿ ಕೊಳಚೆ ನೀರು ಕೂಡ ಮನೆಗಳಿಗೆ ನುಗ್ಗಿದೆ.

 

RELATED ARTICLES

Related Articles

TRENDING ARTICLES