Wednesday, January 22, 2025

ಕೆಇಎ ಪರೀಕ್ಷೆ ಅಕ್ರಮ: ಕಾಂಪೌಂಡ್ ಹಾರಿ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಪರಾರಿ

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ (KEA Exam Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಆರ್‌ಡಿ ಪಾಟೀಲ್ (RD Patil) ಕಾಂಪೌಂಡ್ ಹಾರಿ ಎಸ್ಕೇಪ್ ಆಗಿರುವ ದೃಶ್ಯ ಸೆರೆಯಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ತವರು ಕಲಬುರಗಿಯಲ್ಲೇ (Kalaburagi) ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಜೀವನ ನಡೆಸಿದ್ದಾನೆ. ಕಲಬುರಗಿಯ ಅಪಾರ್ಟ್‌ಮೆಂಟ್‌ನಲ್ಲಿಯೇ ಕಿಂಗ್‌ಪಿನ್ ವಾಸವಿದ್ದರೂ ಪೊಲೀಸರು ಬಂಧಿಸಿಲ್ಲ
ಆರ್‌ಡಿ ಪಾಟೀಲ್ ಬಗ್ಗೆ ಒಬ್ಬರು ಖಚಿತ ಮಾಹಿತಿ ನೀಡಿದರೂ ಖಾಕಿ ಪಡೆ ಬಂಧಿಸಿಲ್ಲ.
ಆಕ್ರಮದ ಕುರಿತು  ಆರ್‌ಡಿ ಪಾಟೀಲ್‌ನನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕಿದ ಪೊಲೀಸರ ಕಳ್ಳಾಟ ಬಯಲಾಗಿದೆ.
ಬೆಳಗ್ಗೆ 10:30ಕ್ಕೆ ಐಪಿಎಸ್ ಅಧಿಕಾರಿಗೆ ಮಾಹಿತಿ ನೀಡಿದರೂ ಮಧ್ಯಾಹ್ನ 1:30ರ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಇನ್ನು ಪೊಲೀಸರ ಬರುವಿಕೆಯ ಮಾಹಿತಿ ಪಡೆದ ಪಾಟೀಲ್, ಪೊಲೀಸರು ಬರುವ ಮುನ್ನವೇ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ.

 

RELATED ARTICLES

Related Articles

TRENDING ARTICLES