ದೆಹಲಿ: ನವದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣವು ದಿನೆದಿನ ಹೆಚ್ಚುತ್ತಲೆ ಇದೆ. ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ನವೆಂಬರ್ 13 ರಿಂದ ನವೆಂಬರ್ 20ರವರೆಗೆ ಸಮ – ಬೆಸ ವಾಹನ ಸಂಚಾರ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಘೋಷಿಸಿದ್ದಾರೆ.
ವಾತಾವರಣದಲ್ಲಿ ವಾಯುಮಾಲಿನ್ಯ ಹೆಚ್ಚಳ ಆಗಿರೋದ್ರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ, ಮಕ್ಕಳು, ಹಿರಿಯರು ಉಸಿರಾಡಲು ಕೂಡ ಪರದಾಡುವಂತಾಗಿದೆ, ಇದನ್ನ ಗಮನದಲ್ಲಿಟ್ಟುಕೊಂಡು ಈ ಆದೇಶವನ್ನ ಹೊರಡಿಸಲಾಗಿದೆ.
ಇದನ್ನೂ ಓದಿ: ಮಾಜಿ ಸಚಿವ ಬಿಜೆಪಿ ನಾಯಕ ಡಿ.ಬಿ.ಚಂದ್ರೇಗೌಡ ಇನ್ನಿಲ್ಲ
ಸದ್ಯ ಈ ಸಮ-ಬೆಸ ಯೋಜನೆ ಅಡಿಯಲ್ಲಿ ಬೆಸ ಅಂಕೆಗಳಲ್ಲಿ ಕೊನೆಗೊಳ್ಳುವ ವಾಹನಗಳು ಬೆಸ ಸಂಖ್ಯೆಯ ದಿನಾಂಕದಲ್ಲಿ ಮಾತ್ರ ರಸ್ತೆಗಿಳಿಯಬೇಕು, ಮತ್ತು ಸಮ ಅಂಕೆಗಳಲ್ಲಿ ಕೊನೆಗೊಳ್ಳುವ ವಾಹನಗಳು ಸಮ ಸಂಖ್ಯೆಯ ದಿನಾಂಕಗಳಲ್ಲಿ ಮಾತ್ರ ರಸ್ತೆಗಿಳಿಯಬೇಕೆಂದು ಸಚಿವ ಗೋಪಾಲ್ ರೈ ಆದೇಶಿಸಿದ್ದಾರೆ.