ಬೆಂಗಳೂರು: ಹಿಂದುಳಿದ ವರ್ಗಗಳ ನಿಗಮಗಳಿಗೆ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ. ಈ ನಡುವೆ ಕೃಷಿ ಪಂಪ್ ಸೆಟ್ಗಳ ವಿದ್ಯುತ್ ಖರ್ಚನ್ನು ರೈತರೇ ಭರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೊಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಉಚಿತ ಬಸ್ ಪ್ರಯಾಣ ಹೊರತುಪಡಿಸಿ, ಗೃಹಲಕ್ಷ್ಮಿ ಹಣ ಅರ್ಧದಷ್ಟು ಕೂಡ ತಲುಪಿಲ್ಲ. ಐಟಿ ದಾಳಿಯಲ್ಲಿ ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ. ಈ ಹಣದಿಂದ ಇವರ ಬಣ್ಣ ಬಯಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ನಾಯಕತ್ವ ವಾರ್ ತಾರಕ್ಕೇರಿದೆ. ವರ್ಗಾವಣೆ ದಂಧೆ ಮುಂದುವರಿದಿದೆ. ನಿರಂತರ ವಿದ್ಯುತ್ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆಡಳಿತ ಪಕ್ಷವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸೋದನ್ನು ಬಿಟ್ಟು ಕಾಂಗ್ರೆಸ್ ಚಲ್ಲಾಟವಾಡ್ತಿದೆ.
ಕೇಂದ್ರ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆಸಿದ್ದಾರೆಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾಡಿದರು.
ಇದನ್ನೂ ಓದಿ: ಟ್ರಾಕ್ಟರ್ಗೆ ಹಿಂಬದಿಯಿಂದ ಲಾರಿ ಡಿಕ್ಕಿ: ಓರ್ವ ಸಾವು
ಬರ ಪರಿಹಾರ: ಪ್ರಧಾನಿ ಭೇಟಿ ವಿಚಾರಕ್ಕೆ ಬಿಎಸ್ವೈ ಗರಂ:
ಬರ ಪರಿಹಾರಕ್ಕೆ ಮಾತುಕತೆ ನಡೆಸುವ ನಿಟ್ಟಿನಲ್ಲಿ ಪ್ರಧಾನಿ ಭೇಟಿಗೆ ಅವಕಾಶ ಸಿಗುತ್ತಿಲ್ಲ ಎಂಬ ಸಿಎಂ ಆರೋಪಕ್ಕೆ, ಸಿದ್ದರಾಮಯ್ಯ ಅವರು ಪ್ರಧಾನಿ ಬಗ್ಗೆ ಅಗೌರವವಾಗಿ ಮಾತನಾಡಿದರೆ ನಿಮ್ಮನ್ನು ಯಾರು ಹತ್ತಿರ ಸೇರಿಸುತ್ತಾರೆ. ಗೌರವಯುತವಾಗಿ ಎರಡು ದಿನ ಕೂತು ಪ್ರಧಾನಿ ಯನ್ನು ಭೇಟಿ ಮಾಡಿ ಎಂದು ಸಲಹೆ ಕೊಟ್ಟರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಚಕ್ರದಲ್ಲಿ ಗಾಲಿ ಇಲ್ಲದೆ ಮುಂದೆಹೋಗ್ತಿಲ್ಲ. ಭರವಸೆ ನೀಡಿ ಅಧಿಕಾರಕ್ಕೆ ಬಂದು ಆಶ್ವಾಸನೆ ಈಡೇರಿಸಲು ಪರದಾಟ ಮಾಡಲಾಗುತ್ತಿದೆ. ಪಕ್ಷದ ಮೇಲೆ ಹಿಡಿತ ಇಲ್ಲ, ಸರ್ಕಾರದ ಮೇಲೆ ಸಿದ್ದರಾಮಯ್ಯಗೆ ನಿಯಂತ್ರಣ ಇಲ್ಲ.
ಗೃಹ ಲಕ್ಷ್ಮೀ ಯೋಜನೆ ಅರ್ಧದಷ್ಟು ತಲುಪಿಲ್ಲ. ರಾಜ್ಯದ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ. ಉಚಿತ ವಿದ್ಯುತ್ ಕೊಡುತ್ತೇವೆ ಎಂದು ದರ ಹೆಚ್ಚಳ ಮಾಡಿದ್ದಾರೆ. ಬರ ಪೀಡಿತ ಪ್ರದೇಶಗಳಿಗೆ ಸಚುವರು ಹೋಗಿಲ್ಲ. ಶಾಸಕರ ಅನುದಾನ ಎರಡು ಕೋಟಿ ಬದಲಾಗಿ ಐವತ್ತು ಲಕ್ಷ ಬಿಡುಗಡೆ ಆಗಿದೆ. ಎಸ್ ಟಿ/ ಎಸ್ ಸಿ ಯೋಜನೆ ಅನುಷ್ಠಾನಕ್ಕೆ ಹಣ ಬಿಡುಗಡೆ ಆಗಿಲ್ಲ. ತಾಂಡಾ ನಿಗಮ, ಅಂಬೇಡ್ಕರ್ ನಿಗಮ, ವಾಲ್ಮೀಕಿ ನಿಗಮಕ್ಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.