Thursday, January 23, 2025

ಸ್ಟಂಟ್ ವೇಳೆ ದುರ್ಘಟನೆ : ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿ ಸ್ಟಂಟ್‌ಮ್ಯಾನ್‌ ಸಾವು

ಪಂಜಾಬ್ : ಟ್ರ್ಯಾಕ್ಟರ್ ಬಳಸಿಕೊಂಡು ಸಾಹಸ ಪ್ರದರ್ಶಿಸುತ್ತಿದ್ದ ಸ್ಟಂಟ್‌ಮ್ಯಾನ್‌, ಆಯಾತಪ್ಪಿ ವಾಹನ ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ಪಂಜಾಬ್‌ನ ಗುರುದಾಸ್‌ಪುರದ ಬಟಾಲಾದಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಮೃತಪಟ್ಟ ಸ್ಟಂಟ್‌ಮ್ಯಾನ್ ಅನ್ನು ಸುಖಮನ್‌ದೀಪ್ ಸಿಂಗ್ (29) ಎಂದು ಗುರುತಿಸಲಾಗಿದೆ. ಜಾತ್ರೆಯಲ್ಲಿ ತಮ್ಮ ಟ್ರ್ಯಾಕ್ಟರ್​ ಬಳಸಿಕೊಂಡು ಮಾಡುತ್ತಿದ್ದ ಸಾಹಸ ಪ್ರದರ್ಶನದ ವೇಳೆ ಈ ದುರಂತ ಸಂಭವಿಸಿದೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಸರಚೂರು ಗ್ರಾಮದ ಕ್ರೀಡಾ ಮೈದಾನದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಸಾಹಸ ಪ್ರದರ್ಶಿಸಲು ಸುಖಮನ್‌ದೀಪ್ ಸಿಂಗ್ ತಮ್ಮ ಟ್ರ್ಯಾಕ್ಟರ್‌ನೊಂದಿಗೆ ಆಗಮಿಸಿದ್ದರು. ಸ್ಟಂಟ್​ ಮಾಡುತ್ತಿದ್ದಾಗ ಟ್ರಾಕ್ಟರ್‌ನ ಮುಂಭಾಗದ ಚಕ್ರಗಳನ್ನು ಮೇಲಕ್ಕೆತ್ತಿ, ಹಿಂಬದಿಯ ಟೈರ್‌ಗಳನ್ನು ನೆಲದ ಮೇಲೆ ಒತ್ತಿದ್ದಾರೆ. ತದನಂತರ ಟ್ರ್ಯಾಕ್ಟರ್‌ ಜತೆಗೆ ಓಡಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ.

RELATED ARTICLES

Related Articles

TRENDING ARTICLES