Wednesday, January 22, 2025

ಟಿಶ್ಯೂ ವಿಚಾರಕ್ಕೆ ಪಾನ್ ಶಾಪ್ ಮಾಲೀಕನಿಂದ ಚೂರಿ ಇರಿತ!

ರಾಯಚೂರು: ಟಿಶ್ಯೂ ಪೇಪರ್ ಕೇಳಿದ ವಿಚಾರಕ್ಕೆ ಕಸ್ಟಮರ್ ಮೇಲೆ ಚೂರಿ ಇರಿದಿರುವ ಘಟನೆ ರಾಯಚೂರು ಜಿಲ್ಲೆಯ ‌ಮಾನ್ವಿ ಪಟ್ಟಣದಲ್ಲಿ ನಡೆದ ಅಪ್ಪು ಡಾಬಾ ಬಳಿ ನಡೆದಿದೆ.

ರಮೇಶ್ ಮತ್ತು ಸತ್ತರ್ ಎಂಬ ಯುವಕರ ಮೇಲೆ ಚೂರಿ ಇರಿತ್ತಕ್ಕೊಳಗಾದವರು. ಪಾನ್ ಶಾಪ್ ಮಾಲೀಕನಿಂದ ವೀರೇಶ್​ ಕ್ಷುಲ್ಲಕ ಕಾರಣಕ್ಕೆ ಅಪ್ಪು ಡಾಬಾ ಮುಂಭಾಗ ಅಟ್ಟಾಡಿಸಿ ಚೂರಿಯಿಂದ ಹಲ್ಲೆ ಮಾಡಿದ್ದಾನೆ.

ಇದನ್ನೂ ಓದಿ: ಕೇರಳ ಸ್ಫೋಟ : ಬಾಂಬ್ ಇಟ್ಟಿದ್ದ ವ್ಯಕ್ತಿ ಪೊಲೀಸರಿಗೆ ಶರಣು

ಡಾಬಾಗೆ ಊಟಕ್ಕೆ ಬಂದಿದ್ದ ರಮೇಶ್ & ಸತ್ತರ್ ಪಾನ್ ಷಾಪ್ ಮಾಲೀಕ ವೀರೇಶ್​​ ನನ್ನು ವೇಯ್ಟರ್​ ಎಂದು ತಿಳಿದುಕೊಂಡು ಏಯ್​ ವೃಯ್ಟರ್​,​​ ಟಿಶ್ಯೂ ಪೇಪರ್ ತಾ ಎಂದಿದ್ದಾರೆ. ಇದೇ ವಿಚಾರಕ್ಕೆ ವೀರೇಶ್ & ಸತ್ತರ್ ಫ್ರೆಂಡ್ಸ್ ನಡುವೆ ಕಿರಿಕ್ ಆಗಿದೆ. ಈ ವೇಳೆ ಈರುಳ್ಳಿ ಎಚ್ಚಲು ಇಟ್ಟಿದ್ದ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಘಟನೆಯಲ್ಲಿ ರಮೇಶ್ ಮತ್ತು ಸತ್ತರ್​​ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮಾನ್ವಿ & ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಪೊಲೀಸರು ಚಾಕು ಇರಿದ ಆರೋಪಿ ವೀರೇಶ್​​ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES