ಬೆಂಗಳೂರು : ಕಾಂಗ್ರೆಸ್ ಒಡೆದ ಮನೆ, ಮೂರು ಬಾಗಿಲು ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಆನೇಕಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ಮನೆಗೆಲ್ಲ ಎರಡು ಮೂರು ಬಾಗಿಲು ಇರುತ್ತವೆ. ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಮೂರು ಬಾಗಿಲು ಇದೇ ಅಂತ ಹೇಳ್ತಾರೆ. ಆದ್ರೆ, ಬಿಜೆಪಿ ಮನೆಯಲ್ಲಿ ಬಾಗಿಲೇ ಇಲ್ಲ, ಬಿಜೆಪಿ ಮನೆಗೆ ಎಲ್ಲಿದೆ ಬಾಗಿಲು? ಎಂದು ಕುಟುಕಿದ್ದಾರೆ.
ಕಳೆದು ಚುನಾವಣೆಯಲ್ಲಿ ಸೋತು ಚಿಂದಿ ಚಿತ್ರಾನ್ನ ಆಗಿಬಿಟ್ಟಿದೆ. ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಈಗ ಮತ್ತೆ ಅಧಿಕಾರ ಹಿಡಿಯುವ ಹಗಲುಗನಸು ಕಾಣುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಸಲ್ಲದ ಹೇಳಿಕೆ ಬೇಡ
ರಾಜ್ಯ ರಾಜಕಾರಣದ ಬಗ್ಗೆ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಶಾಸಕರಿಗೆ ಕಾರವಾರದಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಕಿವಿಮಾತು ಹೇಳಿದ್ದಾರೆ. ಎರಡೂವರೆ ವರ್ಷದ ಬಳಿಕ ಡಿಕೆಶಿ ಮುಖ್ಯಮಂತ್ರಿ ಆಗ್ತಾರೆ ಎನ್ನುವ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇನ್ನು ಎರಡುವರೆ ವರ್ಷ ಇದೆ. ಅಲ್ಲಿ ತನಕ ಕಾದು ನೋಡೊಣ. ಈಗಲೇ ಇಲ್ಲ ಸಲ್ಲದ ಹೇಳಿಕೆ ಬೇಡ ಎಂದು ಹೇಳಿದ್ದಾರೆ. ಇನ್ನು ಯಾರ್ಯಾರಿಗೆ ಯಾವ ಹುದ್ದೆ ಇದೆಯೋ ಅದನ್ನ ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.