Sunday, January 19, 2025

ಮತ್ತೊಂದು ಅಚ್ಚರಿಯ ಫಲಿತಾಂಶ : ಬಾಂಗ್ಲಾದೇಶಕ್ಕೆ ಮಣ್ಣುಮುಕ್ಕಿಸಿದ ನೆದರ್ಲೆಂಡ್ಸ್

ಬೆಂಗಳೂರು : ಏಕದಿನ ವಿಶ್ವಕಪ್-2023 ಟೂರ್ನಿಯಲ್ಲಿ ಇಂದು ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸಿದ್ದ ನೆದರ್ಲೆಂಡ್ಸ್​ ಇದೀಗ ಬಾಂಗ್ಲಾದೇಶ ವಿರುದ್ಧ 87 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ನೆದರ್ಲೆಂಡ್ಸ್​ ನೀಡಿದ್ದ 230 ರನ್​ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾದೇಶ 42.2 ಓವರ್​ಗಳಲ್ಲಿ ಕೇವಲ142 ರನ್​ಗಳಿಗೆ ಸರ್ವಪತನ ಕಂಡಿತು. ಮೆಹಿದಿ ಹಸನ್ ಮಿರಾಝ್ 35, ಮಹಮ್ಮದುಲ್ಲಾ ಹಾಗೂ ಮುಸ್ತಫಿಜುರ್ ರೆಹಮಾನ್ 20 ರನ್​ ಗಳಿಸಿದ್ದು ಬಿಟ್ಟರೆ ಬೇರೆ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ನೆದರ್ಲೆಂಡ್ಸ್ ಪರ ಪಾಲ್ ವ್ಯಾನ್ ಮೀಕೆರೆನ್ 4 ವಿಕೆಟ್, ಬಾಸ್ ಡಿ ಲೀಡ್ 2, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್ ಹಾಗೂ ಕಾಲಿನ್ ಅಕರ್ಮನ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ನೆದರ್ಲೆಂಡ್ಸ್ 50 ಓವರ್​ಗಳಲ್ಲಿ 229 ರನ್​ಗಳಿಗೆ ಆಲೌಟ್ ಆಯಿತು. ಎಡ್ವರ್ಡ್ಸ್ 68, ವೆಸ್ಲಿ 41, ಸಿಬ್ರಾಡ್ 35 ರನ್​ ಗಳಿಸಿದರು. ಬಾಂಗ್ಲಾದೇಶ ಪರ ಶರಿಫುಲ್, ತಸ್ಕಿನ್, ಮುಸ್ತಾಫಿಜರ್, ಮೆಹದಿ ಹಸನ್ ತಲಾ 2 ಹಾಗೂ ಶಕೀಬ್ ಒಂದು ವಿಕೆಟ್ ಪಡೆದರು.​

RELATED ARTICLES

Related Articles

TRENDING ARTICLES