Sunday, September 22, 2024

4 ವರ್ಷಗಳ ನಂತರ ಸಿಲಿಕಾನ್ ಸಿಟಿಯಲ್ಲಿ ಆರ್ಕಿಡ್ ಪುಷ್ಪ ಪ್ರದರ್ಶನ

ಬೆಂಗಳೂರು : ಹೂಗಳೆಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಫಾರೆಸ್ಟ್ ಹೂ ಅಂದ್ರೆ ನೋಡೋಕೆ ಚಂದ. ಆದ್ರೆ, ಕಾಡಿಗೆ ಹೋಗಿ ಹೇಗಪ್ಪ ನೋಡೋದು ಅನ್ನೋರಿಗೆ ಸಿಲಿಕಾನ್ ಸಿಟಿಯಲ್ಲೇ ಈ ಅವಕಾಶ ಸಿಗುತ್ತೆ.

ಬಿಳಿ, ಹಳದಿ, ತಿಳಿ ನೀಲಿ, ಲ್ಯಾವೆಂಡರ್, ಕೆಂಪು, ಹಳದಿ ಆರೆಂಜ್ ಹೀಗೆ ಕಾಣಿಸ್ತಿರೋದು ಆರ್ಕೆಡ್ ಪುಷ್ಪಗಳು ಅಬ್ಬಬ್ಬಾ ಏನ್ ಚಂದಾ ಅಲ್ವಾ.. ಎತ್ತ ಕಣ್ಣು ಹಾಯಿಸಿದರೂ ಕಲರ್ ಫುಲ್ ವೆರೈಟಿ ಆರ್ಕಿಡ್ ಫ್ಲವರ್​ಗಳದ್ದೇ ಕಾರುಬಾರು. ಒಂದ್ಕಡೆ ಕಲರ್ ಕಲರ್ ಹೂಗಳಿದ್ರೆ, ಇತ್ತ ಜನರು ಕಲ್ಲರ್ ಫುಲ್ ಹೂಗಳ ಫೋಟೋ ಕ್ಲಿಕ್ಕಿಸುವಲ್ಲಿ ಬ್ಯುಸಿಯಾಗಿದ್ದರು.

ಸಿಲಿಕಾನ್ ಸಿಟಿಯಲ್ಲಿ ವೀಕೆಂಡ್​​ ಜೊತೆಯಲ್ಲೇ ಹೂಗಳ ಹಬ್ಬವೇ ನೆರೆದಿತ್ತು. ಅದರಲ್ಲೂ ಆರ್ಕಿಡ್ ಹೂವುಗಳೆಂದ್ರೆನೇ ಸ್ಪೆಷಲ್. ಬೆಂಗಳೂರಿಗರಿಗೆ ವೀಕೆಂಡ್​​ನಲ್ಲಿ ಮುದ ನೀಡುವ ಈ ಹೂವುಗಳನ್ನು ನೋಡೋದು ಅಂದ್ರೆ ಕಣ್ಣಿಗೆ ಹಬ್ಬ. ಈ ಅದ್ಭುತ ಹೂವಿನ ಲೋಕವನ್ನು ಕಣ್ತುಂಬಿಕೊಳ್ಳೋಕೆ ಜನಸಾಗರವೇ ನೆರೆದಿತ್ತು.

ವಾರಪೂರ್ತಿ ವರ್ಕ್ ನಲ್ಲಿ ಬ್ಯುಸಿಯಾಗಿದ್ದ ಸಿಟಿ ಜನಕ್ಕೆ ವೀಕೆಂಡ್​ನಲ್ಲಿ ಅಪರೂಪದ ಹೂಗಳ ಪ್ರದರ್ಶನವನ್ನು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ನಾಲ್ಕು ವರ್ಷಗಳ ಬಳಿಕ ಉದ್ಯಾನ ನಗರಿಯಲ್ಲಿ ಎರಡು ದಿನಗಳ ಕಾಲ ಕಾಡಿನ ಜಾತಿ ಹಾಗೂ ಇತರ ಅಪರೂಪದ ಹೂಗಳ ಪ್ರದರ್ಶನವನ್ನು ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ ನಡೆಸುತ್ತಿದೆ. ಇಲ್ಲಿ ವಿಶ್ವದ ನಾನಾ ಭಾಗಗಳಿಂದ ಸಂಗ್ರಹಿಸಿರುವ ಹಲವು ಪ್ರಭೇದದ ಆರ್ಕಿಡ್ ಹೂವುಗಳ ಪ್ರದರ್ಶನವು ಸಸ್ಯ ಪ್ರಿಯರಿಗೆ ಹಬ್ಬವಾಗಿತ್ತು.

ಸಾವಿರಕ್ಕೂ ಹೆಚ್ಚು ಹೂವುಗಳು

ಹರ್ಬೆರಿಯಂ, ಫಲನಾಸ್ಸಿಸ್, ಡೆನ್, ಡೂಬಿಯಂ ಆರ್ಕಿಡ್, ಸಿಂಬಿಡಂ ಆರ್ಕಿಡ್, ಕ್ಯಾಟೆಯಾ ಆರ್ಕಿಡ್ ಮಂಕಿ ಆರ್ಕಿಡ್, ಲೇಡಿ ಸ್ಲಿಪ್ಪರ್, ಡಾನ್ಸಿಂಗ್ ಲೇಡಿ, ಫ್ಲೈಯಿಂಗ್ ಡಕ್ ಹೀಗೆ ವಿವಿಧ ಬಣ್ಣಗಳ ಕಾಂಬಿನೇಷನ್ ಇರುವ ಹೂಗಳು ಸಿಲಿಕಾನ್ ಸಿಟಿ ಜನರ ಕಣ್ಮನ ಸೆಳೆದವು. ಇನ್ನು ಈ ಪ್ರದರ್ಶನದಲ್ಲಿ ಸಾವಿರಕ್ಕೂ ಹೆಚ್ಚು ಹೂವುಗಳು ಇದ್ದು, ಅರ್ಕಿಡ್ ಪುಷ್ಪ ಪ್ರದರ್ಶನದ 8ನೇ ಪ್ರದರ್ಶನ ಇದಾಗಿದೆ.

ಆರ್ಕಿಡ್ ಪ್ರಿಯರಿಗೆ ತರಬೇತಿ

ಆರ್ಕಿಡ್‌ಗಳನ್ನು ಬೆಳೆಯುವ ಆರ್ಕಿಡ್ ಪ್ರಿಯರಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಕೇರಳ, ತಮಿಳುನಾಡು ಸೇರಿದಂತೆ ವಿವಿಧ ನರ್ಸರಿಗಳಿಂದ ಹೂಗಳನ್ನು ಮಾರಾಟಕ್ಕೂ ಕೂಡ ಇಡಲಾಗಿದ್ದು, ಹೆಚ್ಚು ಶ್ರಮವಿಲ್ಲದೆ ಅರ್ಕಿಡ್ ಸಸ್ಯಗಳನ್ನ ಬಳಸಬಹುದಾಗಿದೆ. ಒಟ್ಟಿನಲ್ಲಿ ಬೆಂಗಳೂರಿಗರಿಗೆ ಎರಡು ದಿನಗಳ ಕಾಲದ ಈ ಆರ್ಕಿಡ್​ ಶೋ ಮನಸ್ಸಿಗೆ ಮುದ ನೀಡಲಿದೆ.

RELATED ARTICLES

Related Articles

TRENDING ARTICLES