Monday, December 23, 2024

ವಿದ್ಯುತ್ ಪ್ರವಹಿಸಿ ಲೈನ್​​ಮ್ಯಾನ್ ಸಾವು!

ಹಾವೇರಿ: ವಿದ್ಯುತ್ ಸರಿಪಡಿಸಲು ಹೋಗಿ ಲೈನ್​​ಮ್ಯಾನ್​​ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೆಳಗಾಲ್ ಪೇಟೆಯಲ್ಲಿ ನಡೆದಿದೆ.

ಮಾರುತಿ ಅರ್ಜುನಪ್ಪ ಪೂಜಾರಿ ಮೃತ ದುರ್ದೈವಿಯಾಗಿದ್ದಾರೆ. ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಂದೂವರೆ ವರ್ಷದ ಹಿಂದಷ್ಟೇ ಜ್ಯೂನಿಯರ್ ಲೈನ್ ಮನ್ ಆಗಿ ಕೆಲಸಕ್ಕೆ ಹಾಜರಾಗಿದ್ದರು. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೆಳಗಾಲಪೇಟೆ ಹೆಸ್ಕಾಂ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೃಹತ್​ ಡ್ರಗ್​ ಜಾಲ ಪತ್ತೆ: 5.50 ಕೋಟಿ ಮೌಲ್ಯದ ಡ್ರಗ್ಸ್ ವಶ!

ಸದ್ಯ ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES