Wednesday, May 15, 2024

ಬಿಷನ್ ಸಿಂಗ್ ಬೇಡಿ ನಿಧನಕ್ಕೆ ಪ್ರಧಾನಿ ಮೋದಿ ಕಂಬನಿ

ನವದೆಹಲಿ : ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ನಿಧನರಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಂಬನಿ ಮಿಡಿದಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಷನ್ ಸಿಂಗ್ ಬೇಡಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಅವರ ಉತ್ಸಾಹ ಅಚಲವಾಗಿತ್ತು. ಅವರ ಬೌಲಿಂಗ್ ಪ್ರದರ್ಶನ ಅನುಕರಣೀಯ ಹಾಗೂ ಹಲವು ವಿಜಯಗಳಿಗೆ ಅವಿಸ್ಮರಣೀಯ. ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದರು. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿದ್ದಾರೆ.

ಭಾರತದ ಕ್ರಿಕೆಟ್ ಲೋಕದ ಜೀವಂತ ದಂತಕಥೆ ಎನಿಸಿದ್ದ, ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಮಕ್ಕಳಾದ ನೇಹಾ ಮತ್ತು ಅಂಗದ್​ ರನ್ನು ಅಗಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಬಿಷನ್ ಸಿಂಗ್ ಬೇಡಿ ಆರೋಗ್ಯ ಪರಿಸ್ಥಿತಿ ವಿಷಮಿಸಿತ್ತು. ಮೊಣಕಾಲಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.

ಸ್ಪಿನ್ ಸರ್ದಾರ್ ಬಿಷನ್ ಸಿಂಗ್ ಬೇಡಿ

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಪಿನ್ ಸರ್ದಾರ್ ಆಗಿ ಗುರುತಿಸಿಕೊಂಡಿದ್ದ ಬಿಷನ್ ಸಿಂಗ್ ಬೇಡಿ ಮೂಲತಃ ಪಂಜಾಬ್​ನ ಅಮೃತಸರದವರು. 1967 ಮತ್ತು 1979 ರ ನಡುವೆ ಭಾರತದ ಪರ 67 ಟೆಸ್ಟ್ ಪಂದ್ಯಗಳನ್ನಾಡಿರುವ ಬಿಷನ್ ಸಿಂಗ್ ಬೇಡಿ ಅವರು 266 ಟೆಸ್ಟ್ ವಿಕೆಟ್​ ಕಬಳಿಸಿದ್ದರು. ಹಾಗೆಯೇ 10 ಏಕದಿನ ಪಂದ್ಯಗಳಿಂದ 7 ವಿಕೆಟ್​ಗಳನ್ನು ಪಡೆದಿದ್ದರು.

RELATED ARTICLES

Related Articles

TRENDING ARTICLES