Thursday, December 19, 2024

5ನೇ ವಸಂತದ ಸಂಭ್ರಮದಲ್ಲಿ ಪವರ್​ ಟಿವಿ: ಶುಭಾಶಯ ಕೋರಿದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

ಅ.18 ಇಂದು 5ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಪವರ್​ ಟಿವಿ ನ್ಯೂಸ್​ ಚಾನಲ್​ಗೆ ಶ್ರೀಸಿದ್ದಲಿಂಗೇಶ್ವರ ಗದ್ದುಗೆ ಮಠದ (ಕಾಲಜ್ಞಾನ ಮಠ) ದ ಪರಮಪೂಜ್ಯ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ಶುಭಾಷಯಗಳನ್ನು ಕೋರಿ ಆಶೀರ್ವಾದ ಸಂದೇಶವನ್ನು ಕಳಿಸಿದ್ದಾರೆ.

ಈ ಆಶೀರ್ವಾದ ಸಂದೇಶದಲ್ಲಿ ನಮ್ಮ ಪ್ರೀತಿ ಪಾತ್ರರಾದ ಅಂತರಂಗದ ಶಿಷ್ಯರಾದ ಶ್ರೀಯುತ ಶ್ರೀ ರಾಕೇಶ್ ಶೆಟ್ಟಿಯವರಿಗೆ ಹೃತ್ಪೂರ್ವಕ ತುಂಬು ಹೃದಯದ  ಶುಭಾಶೀರ್ವಾದಗಳನ್ನು ತಿಳಿಸಿದ್ದಾರೆ.

 ಪವರ್​ ಟಿವಿ ಆರಂಭಿಸಿ ಬಂದಂತಹ ಹಲವಾರು ತೊಂದರೆಗಳನ್ನು ಪರಿಹರಿಸಿಕೊಂಡು ಮಾದ್ಯಮದ ಮೂಲಕ ಹಲವರ ಬಾಳಿಗೆ ಪವರನ್ನು ನೀಡಿ ಅವರ ಮುಖದಲ್ಲಿ ನಗುವನ್ನು ತರಿಸುವಲ್ಲಿ ಯಶಸ್ವಿಯಾಗಿರುವುದರಿಂದ ನಿಮ್ಮ ಕಾರ್ಯವು ಅತ್ಯಂತ ಶ್ಲಾಘನೀಯ ಎಂದು ಕೊಂಡಾಡಿದ್ದಾರೆ.

ಇದೇ ವೇಳೆ ಪವರ್​ ಟಿವಿಗೆ ಬೆನ್ನೆಲುಬಾಗಿ ನಿಂತಿರುವ ಪವರ್​ ತಂಡದ ಚಂದನ್​ಶರ್ಮ, ಮಧು ಡಿ.ಎಲ್. ಸಿಂಧೂರ, ಪ್ರಶಾಂತ್​​ ಸೇರಿದಂತೆ ಎಲ್ಲಾ ವಿಭಾಗದ ಮಖ್ಯಸ್ಥರಿಗೂ ತಮ್ಮ ಆಶೀರ್ವಾದವನ್ನು ತಿಳಿಸಿದ್ದಾರೆ. ಇದೇ ರೀತಿ ತಮ್ಮ ಸಾಧನೆಯನ್ನು ಮುಂದುವರೆಸುವಂತೆ ಆರೈಸಿದ್ದಾರೆ.

RELATED ARTICLES

Related Articles

TRENDING ARTICLES