Sunday, June 2, 2024

ದುಡುಕಿದ ದಂಪತಿ..! ಮಗನ ಸಾವಿನ ಕೊರಗಿನಲ್ಲಿ KRS ನಾಲೆಗೆ ಹಾರಿ ಪತಿ-ಪತ್ನಿ ಆತ್ಮಹತ್ಯೆ

ಹಾಸನ : ಅದು ಸುಂದರ ಸಂಸಾರ. ಆ ಸಂಸಾರದ ಮೇಲೆ ಕೆಲ ದಿನಗಳ ಹಿಂದಷ್ಟೇ ಜವರಾಯನ ಕಣ್ಣು ಬಿದ್ದಿತ್ತು. ಮನೆಯ ವಾರಸುದಾರರನ್ನು ಕಳೆದುಕೊಂಡ ಕೊರಗಿನಲ್ಲೇ ಹೆತ್ತವರು ಬಾರದ ಲೋಕದತ್ತ ಪಯಣ ಬೆಳೆಸಿದ್ದಾರೆ.

ಮಗನ ಸಾವಿನ ಕೊರಗಿನಲ್ಲಿ ದಂಪತಿಯೊಂದು ಕೆಆರ್​ಎಸ್ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಗ್ರಾಮದ ಬಳಿ ನಡೆದಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಮೂಲದ ರಂಗಸ್ವಾಮಿ (49) ಹಾಗೂ ಕನಕ (45) ಮೃತ ದಂಪತಿ. ರಾಮನಾಥಪುರ ಬಳಿ ಕೃಷ್ಣರಾಜ ನಾಲೆಗೆ ಬಿದ್ದು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ದಿನಗಳ ಹಿಂದೆಯೇ ಬೈಕ್‌ನಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕೆಲ ವರ್ಷದ ಹಿಂದೆ ಈ ದಂಪತಿಯ ಪುತ್ರ ಸಾವನಪ್ಪಿದ್ದನು. ಇದರಿಂದ ಖಿನ್ನತೆಗೆ ಒಳಗಾಗಿದ್ದ ದಂಪತಿ, ಮಗನ ಅಗಲಿಕೆಯ ಕೊರಗಿನಲ್ಲಿ ಆತುರದ ನಿರ್ಧಾರ ಕೈಗೊಂಡಿದ್ದಾರೆ. ನಿನ್ನೆ ರಾಮನಾಥಪುರ ಸಮೀಪ ದಂಪತಿ ಮೃತದೇಹ ಪತ್ತೆಯಾಗಿದೆ. ಕೊಣನೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ‌ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES