Saturday, May 18, 2024

ದಸರಾ ಬಳಿಕ ಎಲ್ಲರೂ ಒಟ್ಟಿಗೆ ರಾಜ್ಯ ಪ್ರವಾಸ ಮಾಡ್ತೀವಿ : ಯಡಿಯೂರಪ್ಪ

ಶಿವಮೊಗ್ಗ : ನಾನುಈಗಾಗಲೇ ರಾಜ್ಯ ಪ್ರವಾಸ ಆರಂಭಿಸಬೇಕಿತ್ತು. ಹಬ್ಬ ಎಲ್ಲ ಮುಗಿಯಲಿ ಅಂತ ಸುಮ್ಮನಿದ್ದೇನೆ. ದಸರಾ ಹಬ್ಬ ಮುಗಿದ ಬಳಿಕ ಎಲ್ಲೂರು ಒಟ್ಟಿಗೆ ಪ್ರವಾಸ ಮಾಡ್ತೀವಿ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಸ್​ಇಪಿ ಶಿಕ್ಷಣ ತಜ್ಞರ ನೇಮಕ‌ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ‌ ಇಲ್ಲ. ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದರು.

ಬೆಳಗಾವಿಯಲ್ಲಿ ದೊಡ್ಡ ಸೌಧ ಕಟ್ಟಿದ್ದೇವೆ. ಅಷ್ಟೆಲ್ಲಾ ಖರ್ಚು ಮಾಡಿ ಸೌಧ ಕಟ್ಟಿದ್ದೇವೆ. ಅಲ್ಲಿ ಅಧಿವೇಶನ ನಡೆಯಲಿಲ್ಲ ಅಂದ್ರೆ ಏನು ಪ್ರಯೋಜ‌ನ? ಅಂತಿಮವಾಗಿ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಅದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರವಾಗಿ ಮಾತನಾಡಿ, ಈಗಾಗಲೇ ಲೋಡ್ ಶೆಡ್ಡಿಂಗ್ ಶುರು ಆಗಿದೆ. ವಿದ್ಯುತ್ ಶಾಖ್ ಎಲ್ಲರಿಗೂ ಆಗಿದೆ. ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು.

ರಾಗಿಗುಡ್ಡ ಘಟನೆ ಖಂಡಿಸಿ ಪ್ರೊಟೆಸ್ಟ್

ರಾಗಿಗುಡ್ಡ ಘಟನೆ ಹಾಗೂ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನಾ ಸಭೆ ನಡೆಸಿತು. ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ರಸ್ತೆಯಲ್ಲೇ ಬೃಹತ್ ವೇದಿಕೆ ನಿರ್ಮಾಣ ಮಾಡಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ವೈ ವಿಜಯೇಂದ್ರ, ಚನ್ನಬಸಪ್ಪ, ಡಿ.ಎಸ್ ಅರುಣ್, ಭಾರತಿ ಶೆಟ್ಟಿ, ಮಾಜಿ ಶಾಸಕ ಹರತಾಳು ಹಾಲಪ್ಪ ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

RELATED ARTICLES

Related Articles

TRENDING ARTICLES