Monday, May 20, 2024

ಸಿದ್ದರಾಮಯ್ಯ ಸರ್ಕಾರ ಭ್ರಷ್ಟ, ನಿಷ್ಕ್ರಿಯ ಸರ್ಕಾರ : ಗೋವಿಂದ ಕಾರಜೋಳ

ಬಾಗಲಕೋಟೆ : ಕಳೆದ ಐದು ತಿಂಗಳಿಂದ ಸಿದ್ದರಾಮಯ್ಯ ಸರ್ಕಾರ ನಿಷ್ಕ್ರಿಯವಾಗಿದೆ. ಜನಪರ ಕಾಳಜಿ ಇಲ್ಲದ ನಿಷ್ಕ್ರಿಯ ಸರ್ಕಾರ ಇದು. ಕೇವಲ ನಿಷ್ಕ್ರಿಯ ಅಲ್ಲ, ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್​ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ, ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಕೃಷಿ ಕಾರ್ಮಿಕರಿಗೆ ಉದ್ಯೋಗ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಇದೆ. ವಿದ್ಯುತ್ ಪೂರೈಕೆ ಆಗ್ತಿಲ್ಲ, ನಿರಂತರ ಲೋಡ್ ಶೆಡ್ಡಿಂಗ್ ಆಗ್ತಿದೆ. ರೈತರು ಹೆಸ್ಕಾಂ ಕಚೇರಿಗಳ ಮುತ್ತಿಗೆ ಸರ್ವೆ ಸಾಮಾನ್ಯವಾಗಿದೆ ಎಂದರು.

ಈ ವರ್ಷ ಮಳೆ ಸರಿಯಾಗಿ ಆಗಲ್ಲ ಎಂಬ ಹವಾಮಾನ ಇಲಾಖೆಯ ವರದಿಯಿಂದ ಎಚ್ಚೆತ್ತುಕೊಂಡು ಕಲ್ಲಿದ್ದಲು ಖರೀದಿ ಮಾಡಿ ಇಡಬೇಕಿತ್ತು. 5 ಸಾವಿರ ಮೆಗಾ ವ್ಯಾಟ್ ನಮ್ಮ ನಾಲ್ಕು ಥರ್ಮಲ್ ಪವರ್ ಪ್ರೊಜೆಕ್ಟ್ ನಿಂದ ಮಾಡಬಹುದಿತ್ತು. ಕಲ್ಲಿದ್ದಲು ಇಲ್ಲದ್ದಕ್ಕೆ ಎಲ್ಲವೂ ಬಂದ್ ಆಗಿವೆ. ಇನ್‌ಸ್ಟಾಲ್ಡ್ ಕೆಪಾಸಿಟಿ 32 ಸಾವಿರ ಮೆಗಾ ವ್ಯಾಟ್ ಇದೆ. ನಮಗೆ 15ರಿಂದ 16 ಸಾವಿರ ನೆಗಾ ವ್ಯಾಟ್‌ನಷ್ಟು ಅವಶ್ಯಕತೆ ಇದೆ. ಸದ್ಯ 6ರಿಂದ 7 ಸಾವಿರ ಮೆಗಾವ್ಯಾಟ್ ವಿದ್ಯುತ್ ಸಹ ಸಿಗ್ತಿಲ್ಲ ಎಂದು ಬೇಸರಿಸಿದರು.

ಕುರ್ಚಿ ಬಿಟ್ಟು ಕೆಳಗೆ ಇಳಿಯಿರಿ

ಸಕ್ಕರೆ ಕಾರ್ಖಾನೆ ಬಂದ್ ಇರೋದ್ರಿಂದ ಕೋಜನ್ ದಿಂದ ಬರ್ತಿಲ್ಲ. ನಿರಂತರ ಜ್ಯೋತಿ ಹಳ್ಳಿಗಳಲ್ಲಿ ಸಿಗ್ತಿಲ್ಲ, ಪಟ್ಟಣದಲ್ಲೂ ಲೋಡ್ ಶೆಡ್ಡಿಂಗ್ ಆಗ್ತಿದೆ. ಹಾಗಾಗಿ, ಇದೊಂದು ಭ್ರಷ್ಟ, ನಿಷ್ಕ್ರಿಯ ಸರ್ಕಾರ. ಕೂಡಲೇ ರೈತರಿಗೆ ವಿದ್ಯುತ್ ಕೊಡಬೇಕು. ಅದು ಆಗದೇ ಇದ್ದಲ್ಲಿ ಕೂಡಲೇ ಕುರ್ಚಿ ಬಿಟ್ಟು ಕೆಳಗಿಳಿಯುವಂತೆ ಸರ್ಕಾರಕ್ಕೆ ಗೋವಿಂದ ಕಾರಜೋಳ ಆಗ್ರಹ ಮಾಡಿದರು.

RELATED ARTICLES

Related Articles

TRENDING ARTICLES