Monday, May 20, 2024

ತಮಿಳುನಾಡಿಗೆ ನೀರು ಬಿಟ್ಟಿದ್ದೀರಿ, ತುಮಕೂರಿಗೂ ನೀರು ಕೊಡಿ : ಸೊಗಡು ಶಿವಣ್ಣ

ತುಮಕೂರು : ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದೀರಿ, ತುಮಕೂರಿಗೂ ನೀರು ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.

ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸುವಂತೆ ಮನವಿ ಮಾಡಿದರು. ಅಲ್ಲದೆ, ಜಿಲ್ಲೆಯ ಕಾಂಗ್ರೆಸ್​ ಸಚಿವರುಗಳಿಗೆ ಪತ್ರದ ಮೂಲಕ ಒತ್ತಾಯ ಮಾಡಿದರು.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣಗೂ ಪತ್ರ ಬರೆದಿದ್ದೇನೆ. ಹೇಮಾವತಿ ನೀರು ತಮಿಳುನಾಡಿಗೆ ಬಿಡುತ್ತಿರುವುದು ದುರಂತ. ಕಳೆದ ತಿಂಗಳು ನೆಪ ಮಾತ್ರಕ್ಕೆ ತುಮಕೂರು ಜಿಲ್ಲೆಗೆ ನೀರು ಬಿಟ್ಟು ಸ್ಥಗಿತಗೊಳಿಸಲಾಗಿದೆ. ಕೇವಲ 5 ಟಿಎಂಸಿ ನೀರು ಹರಿಸಲಾಗಿದೆ. ಇನ್ನುಳಿದ 20 ಟಿಎಂಸಿ ನೀರು ಬಿಡುವಂತೆ ಆಗ್ರಹಿಸಿದರು.

ಯಾವ ಪುರುಷಾರ್ಥಕ್ಕೆ ನೀರು ಬಿಟ್ಟಿದ್ದೀರಿ?

ತಮಿಳುನಾಡಿಗೆ ಯಾವ ಪುರುಷಾರ್ಥಕ್ಕೆ ನೀರು ಹರಿಸಲಾಗುತ್ತಿದೆ? ಇಡೀ ತುಮಕೂರು ಜಿಲ್ಲೆ ಬರಗಾಲದಿಂದ ತತ್ತರಿಸಿದೆ. ಈ ನಡುವೆ ಹೇಮಾವತಿ ನೀರು ತಮಿಳುನಾಡಿಗೆ ಹೇಗೆ ಬಿಟ್ಟಿದ್ದೀರಿ? ಎಂದು ಸೊಗಡು ಶಿವಣ್ಣ ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES