Wednesday, January 22, 2025

ರಾಹುಲ್ ಗಾಂಧಿ ಮಣಿಪುರಕ್ಕೆ ಹೋಗಿದ್ದು ಭತ್ತ ನಾಟಿ ಮಾಡುವುದಕ್ಕಾ? : ಶಾಸಕ ಯತ್ನಾಳ್

ವಿಜಯಪುರ : ಬಿಜೆಪಿ ನಾಯಕರು ಶಿವಮೊಗ್ಗಕ್ಕೆ ಹೋಗಿರುವುದು ಸತ್ಯ ಶೋಧನೆಗಲ್ಲ ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಲು ಎಂದಿದ್ದ ಕಾಂಗ್ರೆಸ್​ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.

ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಅವರು, ಹಾಗಿದ್ರೆ.. ನಿಮ್ಮ ನಾಯಕ ರಾಹುಲ್ ಗಾಂಧಿಯವರು ಮಣಿಪುರಕ್ಕೆ ಹೋಗಿದ್ದು ಭತ್ತ ನಾಟಿ ಮಾಡುವುದಕ್ಕಾ? ಸತ್ಯ ಶೋಧನೆ ಮಾಡುವುದಕ್ಕೆ ಪೊಲೀಸರಿದ್ದಾರೆ, ಕಾನೂನಿದೆ. ಕಾಂಗ್ರೆಸ್ಸಿಗರ ಅಗತ್ಯವಿರಲಿಲ್ಲ ಅಲ್ಲವೇ? ಕಾಂಗ್ರೆಸ್ ಯಾವುದೇ ಯಾವ ತನಿಖಾ ಏಜೆನ್ಸಿಯೂ ಅಲ್ಲ ಎಂದು ಚಾಟಿ ಬೀಸಿದ್ದಾರೆ.

ಕಾಂಗ್ರೆಸ್​ ಹೇಳಿದ್ದೇನು?

ಬಿಜೆಪಿಯ ಸತ್ಯ ಶೋಧನ ಸಮಿತಿ ತಂಡ ಶಿವಮೊಗ್ಗಕ್ಕೆ  ಭೇಟಿ ನೀಡಿದ್ದ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಶಾಂತ ಸ್ಥಿತಿಗೆ ಬಂದಿರುವ ಶಿವಮೊಗ್ಗಕ್ಕೆ ಬಿಜೆಪಿಗರು ಹೋಗಿದ್ದು ಸತ್ಯ ಶೋಧನೆಗಲ್ಲ, ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಲು. ಸತ್ಯ ಶೋಧನೆ ಮಾಡುವುದಕ್ಕೆ ಪೊಲೀಸರಿದ್ದಾರೆ, ಕಾನೂನಿದೆ, ಬಿಜೆಪಿಯವರ ಅಗತ್ಯವಿಲ್ಲ, ಬಿಜೆಪಿ ಯಾವುದೇ ಯಾವ ತನಿಖಾ ಏಜೆನ್ಸಿಯೂ ಅಲ್ಲ. ಪರಿಸ್ಥಿತಿಯನ್ನು ಹದಗೆಡಿಸಲು ಹೊಂಚು ಹಾಕಿರುವ ಬಿಜೆಪಿಗರ ಸಂಚನ್ನು ಯಶಸ್ವಿಯಾಗಲು ನಮ್ಮ ಸರ್ಕಾರ ಬಿಡಲ್ಲ ಎಂದು ಪೋಸ್ಟ್ ಮಾಡಿತ್ತು.

RELATED ARTICLES

Related Articles

TRENDING ARTICLES