Monday, January 6, 2025

ಯುವತಿ ಆತ್ಮಹತ್ಯೆ: ದೂರು ದಾಖಲಿಸಲು ಹಿಂದೇಟು, PSI ಅಮಾನತು!

ಬೀದರ್​ : ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಈ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ PSIಯನ್ನು ಬೀದರ್​​​​​ SP ಚನ್ನಬಸವಣ್ಣ ಅಮಾನತು ಮಾಡಿದ್ದಾರೆ.

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಭೇಮಳಖೇಡ ಗ್ರಾಮದಲ್ಲಿ ಅಂಬರೀಶ್​ ಎಂಬ ಯುವಕ ಯುವತಿಯೋರ್ವಳ ಫೋಟೋ ಇಟ್ಟುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಮಾಡುವುದಾಗಿ ಬೆದರಿಸಿ ಹಣ ಪಡೆದಿದ್ದ. ಫೋನ್​ ಪೇ ಮೂಲಕ ಒಂದು ಸಾವಿರ ಹಣ ಪಾವತಿಸಿದ್ದ ಯುವತಿ ಮನನೊಂದು ಆಗಸ್ಟ್​​ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅದೇ ದಿನ ದೂರು ದಾಖಲಿಸಲು‌ ತೆರಳಿದ್ದ ಯುವತಿ ಕುಟುಂಬಸ್ಥರ ದೂರು ಸ್ವೀಕರಿಸಲು PSI ನಿರಾಕರಿಸಿದ್ದರು.

ಇದನ್ನೂ ಓದಿ: ನದಿಯಲ್ಲಿ 5 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧಿಗಳು ಪತ್ತೆ!

ಈ ಹಿನ್ನೆಲೆ ಈ PSI ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿ ಆದೇಶಿಸಿದ್ದಾರೆ. ಯುವತಿ ಮೃತದೇಹ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯುವತಿ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಕ್ಸೋ ಪ್ರಕರಣ ದಾಖಲಿಸಿ ಯುವಕ ಅಂಬರೀಶ್‌ನನ್ನ ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

RELATED ARTICLES

Related Articles

TRENDING ARTICLES