Sunday, December 15, 2024

ನದಿಯಲ್ಲಿ 5 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧಿಗಳು ಪತ್ತೆ!

ರಾಮನಗರ: ಅವಧಿ ಮೀರಿದ ಔಷಧಿಗಳನ್ನು ಜಾಗರೂಕತೆಯಿಂದ ಡಿಸ್​​ಪೋಸ್​ ಮಾಡಬೇಕು. ಇಲ್ಲವಾದರೆ ಅವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ರಾಮನಗರದ ದ್ಯಾವರಸೆಗೌಡನದೊಡ್ಡಿ ಸೇತುವೆ ಬಳಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿವೆ.

ಔಷಧಿಗಳ ಚೀಲವನ್ನು ಕಿಡಿಗೇಡಿಗಳು ನದಿಗೆ ಎಸೆದು ಹೋಗಿದ್ದಾರೆ. ನದಿ ನೀರಿನ ಪ್ರಮಾಣ ವೀಕ್ಷಣೆ ವೇಳೆ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿವೆ. ಇನ್ನೂ ಔಷಧಿಗಳು ಕರಗದ ಹಿನ್ನೆಲೆಯಲ್ಲಿ ಭಾರೀ ಅನಾಹುತ ತಪ್ಪಿದೆ. ಮೆಡಿಕಲ್ ಸ್ಟೋರ್ ಮಾಲೀಕನಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಚೈತ್ರಾ ಬಂಧನದ ಹಿಂದಿನ ರಹಸ್ಯ ರಿವೀಲ್​​!

ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಅವಧಿ‌ ಮೀರಿದ ಔಷಧಿಗಳು ಪತ್ತೆಯಾಗಿವೆ. ಜಲಮಂಡಳಿ ಅಧಿಕಾರಿಗಳು ಔಷಧಿಗಳ ಚೀಲ ಹೊರ ತೆಗೆಸಿದ್ದಾರೆ. ಮಾತ್ರೆಗಳ ಮೇಲಿದ್ದ ಬ್ಯಾಚ್‌ ಸಂಖ್ಯೆ ಆಧರಿಸಿ ಕ್ರಮಕ್ಕೆ ನಿರ್ಧಿರಿಸಲಾಗಿದೆ.

RELATED ARTICLES

Related Articles

TRENDING ARTICLES