ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ. ಇಬ್ಬರು ವೈರಿಗಳು ಒಂದಾಗಿ ಕಾಂಗ್ರೆಸ್ ಸರ್ಕಾರ ಬೀಳುವ ದಿನಾಂಕ ನೀಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಿಂದೆ ಜೆ.ಹೆಚ್. ಪಟೇಲರು ಮುಖ್ಯಮಂತ್ರಿ ಆಗಿದ್ದಾಗ ಸದನದಲ್ಲಿ ಒಂದು ಕಥೆ ಹೇಳಿದ್ದರು. ಅದೇನೋ ಬಿದ್ದು ಹೋಗುತ್ತೆ ಅಂತ. ನೀವು ಅವರ ಭಾಷಣವನ್ನು ಒಮ್ಮೆ ನೋಡಿ. ಈಗ ಇಬ್ಬರು ವೈರಿಗಳು ಒಂದಾಗಿ ಸರ್ಕಾರ ಬೀಳುತ್ತದೆ ಅಂತ ಒಂದೊಂದು ದಿನಾಂಕ ನೀಡುತ್ತಿದ್ದಾರೆ. ಇವರ ಹೇಳಿಕೆ ಜೆ.ಹೆಚ್. ಪಟೇಲರ ಕಥೆ ಎರಡೂ ಒಂದೇ ಎಂದು ಚಾಟಿ ಬೀಸಿದ್ದಾರೆ.
ಸಿಎಂ, ನಾನು ತೀರ್ಮಾನ ಮಾಡಿದ್ದೇವೆ
ಈಗ ಮಳೆ ನಿಂತಿದೆ, ಮತ್ತೆ ಮಳೆ ಮನ್ಸೂಚನೆ ಇದೆ. ಅಪ್ರೂವ್ಡ್ ಕಾಮಗಾರಿಗಳನ್ನು ಅವಶ್ಯಕತೆ ಇರುವ ಕಾಮಗಾರಿಗಳನ್ನು ಮತ್ತೆ ಕಾರ್ಯಾರಂಭ ಮಾಡಲಾಗುವುದು. ಮಳೆ ಬರುವ ಒಳಗೆ ಮುಗಿಸಬೇಕೆಂದು ಸೂಚನೆ ನೀಡಿದ್ದೇನೆ. ಅಮೃತನಗರ ಯೋಜನೆಯಡಿ ಕೆಲಸಗಳನ್ನು ಕಂಪ್ಲೀಟ್ ಮಾಡಲು ಸೂಚನೆ ನೀಡಲಾಗಿದೆ. ಐದು ಸಾವಿರ ಕೋಟಿ ವೆಚ್ಚದ ಕಾಮಗಾರಿಗಳು ನಡೆಯಲಿವೆ. ರಾಜ್ಯ ಸರ್ಕಾರದ ಗ್ರ್ಯಾಂಟ್, ಬಿಲ್ ಗಳನ್ನ 50% ರಿಲೀಸ್ ಮಾಡಲು ಸಿಎಂ, ನಾನು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.
650 ಕೋಟಿಯಷ್ಟು ರಿಲೀಸ್ ಆಗಿದೆ
650 ಕೋಟಿಯಷ್ಟು ರಿಲೀಸ್ ಆಗಿದೆ. ಇನ್ನೂ 750 ಕೋಟಿಯಷ್ಟು ಬಿಬಿಎಂಪಿಯಿಂದ ರಿಲೀಸ್ ಮಾಡ್ತೀವಿ. 432 ಕೋಟಿ ಗುತ್ತಿಗೆದಾರರಿಗೆ ರಿಲೀಸ್ ಮಾಡಿದ್ದೀವಿ. ಎಲ್ಲಾ ಇಂಜಿನಿಯರ್ಸ್ ಕಂಟ್ರಾಕ್ಟರ್ ಗಳ ಜೊತೆ ಇದ್ದು ಕಾಮಗಾರಿಗಳನ್ನು ಮುಗಿಸಬೇಕು. ಮೊನ್ನೆ ಸಾಲು ರಜೆ, ಟ್ರಾಫಿಕ್ ಜಾಮ್ ಆಗಿತ್ತು. ಟ್ರಾಫಿಕ್ ಇಲಾಖೆಯವರನ್ನು ಕರೆಸಿ ಮಾತಾಡಿದೆ. ಏಳನೇ ತಾರೀಖು ಔಟರ್ ರಿಂಗ್ ರೋಡ್ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.