Thursday, December 19, 2024

ಅವ್ರು ಬರೆದಿದ್ದು, ಪತ್ರಗಳಿಗೆ ಸಹಿ ಹಾಕಿದ್ದೆಲ್ಲ ತಂದು ಇಡ್ಲಾ? : ಡಿ.ಕೆ ಶಿವಕುಮಾರ್

ಬೆಂಗಳೂರು : ಬಿಜೆಪಿಯವರಿಗೆ ಅರ್ಜೆಂಟ್ ಇದೆ. ನೀವು ಅವರನ್ನು ತೋರಿಸುತ್ತಿದ್ದೀರಿ. ಪಾಪ ಅವರದ್ದು ಏನೂ ನಮಗೆ ಗೊತ್ತಿಲ್ಲ ಅಂತ ತಿಳಿದುಕೊಂಡಿದ್ದಾರೆ. ಅವರು ಬರೆದಿದ್ದು, ಪತ್ರಗಳಿಗೆ ಸಹಿ ಹಾಕಿದ್ದು ಎಲ್ಲಾ ತಂದು ಇಡ್ಲಾ? ಎಂದು ಬಿಜೆಪಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುಡುಗಿದರು.

ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುವಂತೆ ಬರೆದ ಪತ್ರದ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೆಸರು ಹೇಳಿದಿನಲ್ಲ, ನಾವು ಬರೆದಿಲ್ಲ ಅಂತ ಹೇಳಲಿ.. ನಾನು ಮುಂದಿಟ್ಟು ಹೇಳುತ್ತೇನೆ ಎಂದು ಸವಾಲೆಸೆದರು.

ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ತಮ್ಮ ಮನೆ ಹುಳುಕು, ದೋಸೆ ತೂತು ಅವರ ಕಣ್ಣಿಗೆ ಕಾಣುತ್ತಿಲ್ಲ. ಅವರ ಅಧಿಕಾರಾವಧಿಯಲ್ಲಿ ಏನು ಮಾಡಿದ್ರು ಅಂತ ಜನರಿಗೆ ಗೊತ್ತಿಲ್ಲ ಅಂತ ತಿಳಿದುಕೊಂಡಿದ್ದಾರೆ. ಜನರು ಅವರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಒಂದು ವಿಪಕ್ಷ ನಾಯಕರನ್ನ ಆಯ್ಕೆ ಮಾಡಲು ಆಗುತ್ತಿಲ್ಲ. ಆದರೂ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

7,361 ರೌಡಿ ಶೀಟರ್​ಗಳನ್ನು ಕೈ ಬಿಟ್ಟಿದ್ದಾರೆ

ನನಗೆ ಹೇಳುತ್ತಾರಲ್ಲ, ಬಿಜೆಪಿ ಸರ್ಕಾರದಲ್ಲಿ ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ. ಹಿಂಸಾಚಾರದ ಪ್ರಕರಣಗಳು ವಾಪಸ್ ಪಡೆದಿದ್ದಾರೆ. 2019ರಲ್ಲಿ ಒಟ್ಟು 385 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದ್ದಾರೆ. ಸಾವಿರಕ್ಕೂ ಹೆಚ್ಚು ಘಟನೆಗಳಿವೆ. ಆರಂಭದಲ್ಲಿ 7,361 ರೌಡಿ ಶೀಟರ್​ಗಳನ್ನು ಕೈ ಬಿಟ್ಟಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES