Sunday, May 19, 2024

ಲೋಕಸಭಾ ಚುನಾವಣೆ: ಬಿಹಾರದ ಜಾತಿ ಆಧಾರಿತ ಜನಗಣತಿ ವರದಿ ಬಿಡುಗಡೆ!

ಬಿಹಾರ : ಪ್ರಧಾನಿ ಮೋದಿಗೆ ಠಕ್ಕರ್ ಕೊಡಲು I.N.D.I.A. ಒಕ್ಕೂಟ ಮುಂದಾಗಿದೆ. ಇದರ ಮುಂದುವರೆದ ಭಾಗವಾಗಿ 2024ರ ಲೋಕಸಭೆ ಚುನಾವಣೆಗೂ ಮುನ್ನವೇ ಬಿಹಾರದ ರಾಜ್ಯ ಸರ್ಕಾರ ಜಾತಿ ಆಧಾರಿತ ಜನಗಣತಿಯ ವರದಿ ಬಿಡುಗಡೆ ಮಾಡಿದೆ.

ಈ ಬಗ್ಗೆ ಬಿಹಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಿಹಾರದಲ್ಲಿ ಹಿಂದುಳಿದ ವರ್ಗ 27.13% ಮತ್ತು ಅತ್ಯಂತ ಹಿಂದುಳಿದ ವರ್ಗ 36.01%, ಸಾಮಾನ್ಯ ವರ್ಗ 15.52%. ಇದೆ. ಬಿಹಾರದ ಒಟ್ಟು ಜನಸಂಖ್ಯೆ 13 ಕೋಟಿಗಿಂತ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶ್ರೀದೇವಿಯದ್ದು ಸಹಜ ಸಾವಲ್ಲ: ಸಾವಿನ ರಹಸ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್​!

ಬಿಹಾರದಲ್ಲಿ ಜಾತಿ ಸಮೀಕ್ಷೆ ಕೆಲವು ವರ್ಷಗಳ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು. ರಾಜಕೀಯ ಲಾಭಕ್ಕಾಗಿ ನಿತೀಶ್​​ ಕುಮಾರ್​ ನೇತೃತ್ವದ ಸರ್ಕಾರ ಈ ಸಮೀಕ್ಷೆಯನ್ನು ಮಾಡುತ್ತಿದ್ದಾರೆ ಎಂಬ ವಾದಗಳು ಬಂದಿದೆ. ಲೋಕಸಭೆ ಚುನಾವಣೆಯನ್ನು ಮುಂದಿಟ್ಟಿಕೊಂಡು ಸರ್ಕಾರ ಈ ಸಮೀಕ್ಷೆಯನ್ನು ಮಾಡಿದೆ ಎಂದು ಹೇಳಲಾಗುತ್ತಿದೆ.

ಬಿಹಾರ 13 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ. ಈ ಪೈಕಿ ಹಿಂದೂ ಸಮುದಾಯದ ಜನಸಂಖ್ಯೆ 81.9%ರಷ್ಟು, ಮುಸ್ಲಿಂ ಜನಸಂಖ್ಯೆ 17.7%, ಕ್ರಿಶ್ಚಿಯನ್ 0.05%, ಸಿಖ್- 0.01%, ಬೌದ್ಧ 0.08% ಹಾಗೂ ಜೈನ 0.06%ರಷ್ಟಿದ್ದರೆ ಇತರ ಧರ್ಮಗಳ ಜನಸಂಖ್ಯೆ 0.12%ರಷ್ಟು ಇದೆ ಎಂದು ಈ ಸಮೀಕ್ಷೆ ವಿವರಿಸಿದೆ.

RELATED ARTICLES

Related Articles

TRENDING ARTICLES