Wednesday, January 22, 2025

ಡೆಡ್ಲಿ ಆ್ಯಕ್ಸಿಡೆಂಟ್ ದೃಶ್ಯ CCTVಯಲ್ಲಿ ಸೆರೆ : ವಿಚಾರಣೆಗೆ ಬರುವಂತೆ ನಾಗಭೂಷಣ್​ಗೆ ನೋಟಿಸ್

ಬೆಂಗಳೂರು : ನಟ ನಾಗಭೂಷಣ್​ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಕರ ಅಪಘಾತದ ಮತ್ತೊಂದು ಭೀಕರ ದೃಶ್ಯ ಲಭ್ಯವಾಗಿದೆ. ಅಪಾರ್ಟ್​​​ಮೆಂಟ್​​​​​ ಹೊರಗೆ ಡಿಕ್ಕಿ ಹೊಡೆದಿದ್ದ ಕಾರು, ಇದೇ ಈ ವೇಳೆ ಅಲ್ಲೆ ವಾಕಿಂಗ್​ ಮಾಡುತ್ತಿದ್ದ ಪ್ರೇಮಾ, ಕೃಷ್ಣಾ ಮೇಲೆ ಹರಿದಿದೆ. ಈ ಡೆಡ್ಲಿ ಆ್ಯಕ್ಸಿಡೆಂಟ್​​​​ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಕಾರು ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ನಟ ನಾಗಭೂಷಣ್ ಬಂಧಿಸಿ, ಆನಂತರ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ನಟನಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಅಕ್ಟೋಬರ್ 3ರಂದು ಹಾಜರಾಗಲು ನೋಟಿಸ್​​​ನಲ್ಲಿ ತಿಳಿಸಿದ್ದಾರೆ. ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರೇಮಾ ಎನ್ನುವ ಮಹಿಳೆ ಸಾವನ್ನಪ್ಪಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪತಿ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಟನ ಮೇಲೆ ಯಾವೆಲ್ಲ ಪ್ರಕರಣ ದಾಖಲು?

ನಟ ನಾಗಭೂಷಣ್ ಈ ಅಪಘಾತಕ್ಕೆ ಕಾರಣವಾಗಿದ್ದು, ಈ ಘಟನೆಯ ಕುರಿತು ಸ್ವತಃ ನಾಗಭೂಷಣ್ ಕೂಡ ಪೊಲೀಸರ ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾರೆ. ನಾಗಭೂಷಣ್ ವಿರುದ್ದ ಐಪಿಸಿ 279(ನಿರ್ಲಕ್ಷತೆ, ರ್ಯಾಷ್ ಡ್ರೈವಿಂಗ್, ಪುಟ್ ಬಾತ್ ಮೇಲೆ ವಾಹನ ಚಲಾವಣೆ), 337(ಜೀವಕ್ಕೆ ಹಾನಿ ಮಾಡೋದು) ಹಾಗೂ 304A (ಅಪಘಾತ ಪ್ರಕರಣ) ಅಡಿಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES