Wednesday, January 22, 2025

ಕಾವೇರಿಯಿಂದ ಮತ್ತೆ 5 ಸಾವಿರ ಕ್ಯೂಸೆಕ್ಸ್​ ನೀರು ಹರಿಸಲು ಒತ್ತಾಯಕ್ಕೆ ತಮಿಳುನಾಡು ಸರ್ಕಾರ ತೀರ್ಮಾನ!

ತಮಿಳುನಾಡು : ಕಾವೇರಿ ನದಿಯಿಂದ ಮತ್ತೆ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಒತ್ತಾಯ ಹೇರೋದಾಗಿ ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದುರೈಮುರುಗನ್ ಹೇಳಿದ್ದಾರೆ.

ಇಂದು ರಾಜ್ಯಾದ್ಯಂತ ಅಖಂಡ ಕರ್ನಾಟಕ ಬಂದ್​ ಗೆ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾವೇರಿ ನೀರಿಗಾಗೀ ಕನ್ನಡ ಚಿತ್ರರಂಗವು ಸೇರಿ ಹಲವು ಸಂಘಟನೆಗಳು ಸಾಥ್​ ನಿಡಿದೆ.

ಇದನ್ನೂ ಓದಿ: ನಮ್ಮ ಮನೆಯ ಸೆಕ್ಯೂರಿಟಿ ನಮ್ಮ ಮನೆಯ ನೀರನ್ನು ಪಕ್ಕದ ಮನೆಗೆ ನೀಡ್ತಾ ಇದಾನೆ ; ನಟ ಉಪೇಂದ್ರ

ಇಂದು ದಿಲ್ಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮತ್ತೊಂದು ಸಭೆ ಕೂಡಾ ಇದೆ. ಈ ಸಭೆಯಲ್ಲಿ ಕರ್ನಾಟಕ ಸರ್ಕಾರವು ಸಮಿತಿ ಮುಂದೆ ತನ್ನ ಬಲವಾದ ವಾದ ಮಂಡಿಸಲು ತೀರ್ಮಾನಿಸಿದೆ, ಈ ಎಲ್ಲಾ ಬೆಳವಣಿಗೆಗಳ ನಡುವಲ್ಲೇ ತಮಿಳುನಾಡು ಸರ್ಕಾರ ಹೆಚ್ಚುವರಿ ನೀರಿಗಾಗಿ ಮತ್ತೆ ಬೇಡಿಕೆ ಮಂಡಿಸಲು ತೀರ್ಮಾನಿಸಿದ್ದು ಇದು ಕರ್ನಾಟಕಕ್ಕೆ ಸವಾಲಾಗಿದೆ.

ಸದ್ಯ ಪ್ರತಿ ದಿನ 3 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದ್ದು, ಈ ಪ್ರಮಾಣವನ್ನು 5 ಸಾವಿರ ಕ್ಯುಸೆಕ್‌ಗೆ ಏರಿಕೆ ಮಾಡುವಂತೆ ತಮಿಳುನಾಡು ಒತ್ತಾಯ ಹೇರಲು ನಿರ್ಧರಿಸಿದೆ ಎಂದು ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದುರೈಮುರುಗನ್ ಹೇಳಿದ್ದಾರೆ.

ಇದೀಗ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಯಾವ ನಿರ್ಧಾರಕ್ಕೆ ಬರಲಿದೆ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ. ಒಂದು ವೇಳೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುವಂತೆ ಆದೇಶ ನೀಡಿದರೆ ಕರ್ನಾಟಕ ರಾಜ್ಯದಲ್ಲಿ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳಲಿವೆ.

RELATED ARTICLES

Related Articles

TRENDING ARTICLES