Thursday, May 2, 2024

ಬೆಂಗಳೂರು ಬಂದ್ : ಎಂದಿನಂತೆ ರಸ್ತೆಗಿಳಿದ ಆಟೋ, ಬಸ್

ಬೆಂಗಳೂರು : ಕಾವೇರಿ ನೀರಿಗಾಗಿ ಇಂದು ಬೆಂಗಳೂರು ಬಂದ್ ಇದ್ದರೂ ಬಸ್, ಆಟೋ, ಟ್ಯಾಕ್ಸಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ಬೆಂಗಳೂರಿನ ಮೆಜೆಸ್ಟಿಕ್, ಆನಂದ್ ರಾವ್ ವೃತ್ತ, ಶಾಂತಿನಗರ, ಯಶವಂತಪುರದಲ್ಲಿ ಆಟೋಗಳು ರಸ್ತೆಗಿಳಿದಿವೆ. ಹೈಕೋರ್ಟ್​ ಬಂದ್​ಗೆ ತಡೆ ನೀಡಿರುವ ಹಿನ್ನಲೆ ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿ ಬಸ್​ಗಳು ಎಂದಿನಂತೆ ಕಾರ್ಯಚರಣೆ ನಡೆಸುತ್ತಿವೆ. ಬಿಎಂಟಿಸಿ ಬಸ್​​ಗಳು ನಗರದ ವಿವಿಧ ಪ್ರದೇಶಗಳಲ್ಲಿ ಸಂಚಾರ ನಡೆಸುತ್ತಿವೆ.

ಕೆಲವು ಹೋಟೆಲ್​ಗಳು ಹಾಗೂ ಪೆಟ್ರೋಲ್​ ಬಂಕ್​ಗಳು ಬೆಳಗ್ಗೆ 6 ಗಂಟೆಯಿಂದಲೇ ಓಪನ್ ಆಗಿವೆ. ಬಂದ್​ಗೆ  ಖಾಸಗಿ ಸಾರಿಗೆ ಒಕ್ಕೂಟ ಬೆಂಬಲ ಸೂಚಿಸಿದ್ದರೂ ವಾಹನಗಳು ರಸ್ತೆಗಿಳಿದಿವೆ.

90ಕ್ಕೂ ಹೆಚ್ಚು ಸಂಘಟನೆ ಬೆಂಬಲ

ಬೆಂಗಳೂರು ಬಂದ್​ಗೆ 90ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ. ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳ , ಕೆ.ಆರ್. ಪೇಟೆಯಲ್ಲಿ ಬಂದ್ ನಡೆಸಲು ಸ್ಥಳೀಯ ಸಂಘಟನೆಗಳು ನಿರ್ಧರಿಸಿವೆ.

RELATED ARTICLES

Related Articles

TRENDING ARTICLES