Thursday, May 2, 2024

ಇಂದು ಸುಪ್ರೀಂ​ನಲ್ಲಿ ‘ಕಾವೇರಿ’ ಅರ್ಜಿ ವಿಚಾರಣೆ!

ದೆಹಲಿ : ಇಂದು ಕರ್ನಾಟಕದ ಪಾಲಿಗೆ ಮಹತ್ವದ ದಿನವಾಗಿದೆ. ಸಮರ್ಪಕ ಪ್ರಮಾಣದ ಕಾವೇರಿ ನೀರು ಹರಿಸಲು ನಿರ್ದೇಶನ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನ ಇಂದು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.

ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಲಿದ್ದಾರೆ. ಸುಪ್ರೀಂನ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಅಲ್ಲದೇ ಇಂದೇ ಕರ್ನಾಟಕ ರೈತ ಸಂಘ ಸಲ್ಲಿಸಿರುವ ಅರ್ಜಿಯನ್ನೂ ಸಹ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಕಾವೇರಿ ವಿಚಾರ: ನಟ ದರ್ಶನ್​ ಟ್ವೀಟ್​ ಪೊಸ್ಟ್​!

ನ್ಯಾ.ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠದ ಪೈಕಿ ಓರ್ವ ನ್ಯಾಯಾಧೀಶರು ಅನುಪಸ್ಥಿತಿಯಲ್ಲಿರುವ ಹಿನ್ನೆಲೆ ವಿಚಾರಣೆ ಮುಂದೂಡಲಾಗಿತ್ತು. ಈ ಮೊದಲು ಅರ್ಜಿ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆದರೆ ನ್ಯಾಯಾಧೀಶರ ಅನುಪಸ್ಥಿತಿ ಹಿನ್ನೆಲೆ ಪಟ್ಟಿಯಿಂದ ಹಿಂತೆಗೆದುಕೊಳ್ಳಲಾಗಿತ್ತು. ಇಂದಿನ ಸುಪ್ರೀಂ ತೀರ್ಪಿನತ್ತ ರಾಜ್ಯದ ಚಿತ್ತ ನೆಟ್ಟಿದೆ.

RELATED ARTICLES

Related Articles

TRENDING ARTICLES