Sunday, May 19, 2024

40 ಪರ್ಸೆಂಟ್ ಆರೋಪ ಮಾಡಿದ ಸಿದ್ಧರಾಮಯ್ಯಗೆ ನನ್ನ ಸವಾಲ್ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ತನಿಖೆಯಾಗಲಿ, ತನಿಖಾಧಿಕಾರಿಗಳ ಮುಂದೆ ಹಣ ಕೊಟ್ಟ ಐಎಎಸ್ ಅಧಿಕಾರಿಗಳನ್ನು ನಾನೇ ಹಾಜರುಪಡಿಸುತ್ತೇನೆ ಎಂದು ಸಿದ್ಧರಾಮಯ್ಯ ಅವರಿಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ನನ್ನ ವಿರುದ್ಧ ಆಧಾರ ರಹಿತವಾಗಿ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಆದರೆ ಈಗ ಅವರ ಮಗ ಯತೀಂದ್ರ ನೇರವಾಗಿ ಕಮಿಷನ್ ಪಡೆಯುತ್ತಿದ್ದಾರೆ, ಇದನ್ನು ನಾನು ಸಾಬೀತು ಪಡಿಸುತ್ತೇನೆ ಎಂದು ಸವಾಲ ಹಾಕಿದ್ದಾರೆ.

ಇದನ್ನು ಓದಿ : ನವಜಾತ ಶಿಶುವನ್ನ ಬಿಸಾಡಿ ಹೋದ ದುಷ್ಟ ಪೋಷಕರು

ವರ್ಗಾವಣೆ ದಂಧೆಯಲ್ಲೂ ಸಹ ಇವರು ಪಾಲುದಾರರಾಗಿದ್ದಾರೆ. ನನ್ನ ಮೇಲೆ ಆರೊಪ ಬಂದಾಗ ನಾನೇ ಖುದ್ದಾಗಿ ರಾಜೀನಾಮೆ ಕೊಟ್ಟು ಹೊರಬಂದಿದ್ದೆ. ಹೈಕೋರ್ಟ್​ ನನಗೆ ಕ್ಲೀನ್ ಚಿಟ್ ನೀಡಿದೆ. ಹಾಗೆಯೇ ಕಾಂಗ್ರೇಸ್ ಸರ್ಕಾರದ ವರ್ಗಾವಣೆ ದಂಧೆ ಮತ್ತು ಶೇ. 40ರ ಕಮಿಷನ್ ಆರೋಪದಡಿಯಲ್ಲಿ ಒಬ್ಬ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರನ್ನು ನೇಮಕ ಮಾಡಲಿ. ಆಗ ತನಿಖೆಯಾಗಲಿ, ತನಿಕಾಧಿಕಾರಿಗಳ ಮುಂದೆ ಹಣ ಕೊಟ್ಟ ಐಎಎಸ್ ಅಧಿಕಾರಿಗಳನ್ನು ನಾನೇ ಹಾಜರುಪಡಿಸುತ್ತೇನೆ ಎಂದು ಈಶ್ವರಪ್ಪ ಸವಾಲನ್ನು ಎಸೆದಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದ್ದು, ಆಡಳಿತ ಪಕ್ಷ ಅದನ್ನು ಮರೆತು ಮಲಗಿದೆ. ಕೇಂದ್ರ ಸರ್ಕಾರಕ್ಕೆ ನೆರವು ಕೇಳಲು ಕೆಲವು ಅಗತ್ಯ ದಾಖಲೆಗಳು ಬೇಕಾಗುತ್ತದೆ. ಅದರ ಪ್ರಕಾರ ಸರ್ವೆಯಾಗಬೇಕು, ರಾಜ್ಯ ಸರ್ಕಾರದಲ್ಲಿ ಯಾವುದೇ ಮಾಹಿತಿ ಇಲ್ಲ. ಜಿಲ್ಲಾ ಮಂತ್ರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ರೈತರ ಕಷ್ಟ ಕೇಳುತ್ತಿಲ್ಲ. ಆತಂರಿಕ ಗೊಂದಲದಲ್ಲಿ ಸರ್ಕಾರವಿದೆ ಎಂದು ಈಶ್ವರಪ್ಪ ಟೀಕಿಸಿದ್ಧಾರೆ.

ಒಂದು ತಿಂಗಳೊಳಗೆ ಇಡೀ ರಾಜ್ಯದ ವಿವರಗಳನ್ನು ಪಡೆಯಬೇಕು. ಹಾಗೂ ಮಳೆ ಇಲ್ಲದೆ ಬೆಳೆ ಎಷ್ಟು ನಷ್ಟವಾಗಿದೆ, ರೈತರ ಆತ್ಮಹತ್ಯೆಗಳೆಷ್ಟು, ಪರಿಹಾರವೇನು ಮುಂತಾದ ವಿವರಗಳೊಂದಿಗೆ ಸರ್ವಪಕ್ಷ ನಿಯೋಗಗಳ ಜೊತೆ ಪ್ರಧಾನಿಗಳ ಬಳಿ ಹೋಗೋಣ ನೆರವು ಕೇಳೋಣ ಮತ್ತು ನಾವು ಕೂಡ ಜೊತೆಯಲ್ಲಿ ಇರುತ್ತೇವೆ. ಅದನ್ನು ಬಿಟ್ಟು ರೈಯತರ ಕಷ್ಟಗಳಿಗೆ ಸ್ಪಂದಿಸದೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ತರವಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ಧಾರೆ.

RELATED ARTICLES

Related Articles

TRENDING ARTICLES