ತಮಿಳುನಾಡು : ಸಾಮಾಜಿಕ ತಾರತಮ್ಯದ ಕುರಿತು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಸೋಮವಾರ ನೀಡಿರುವ ಹೇಳಿಕೆ DMK ನೇತೃತ್ವದ ರಾಜ್ಯ ಸರ್ಕಾರದೊಂದಿಗೆ ಹೊಸ ವಾಗ್ವಾದಕ್ಕೆ ಕಾರಣವಾಗಿದೆ.
ರಾಜ್ಯದ ವಿವಿಧೆಡೆ ಸಾಮಾಜಿಕ ತಾರತಮ್ಯ ಇನ್ನೂ ಚಾಲ್ತಿಯಲ್ಲಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಜಾತಿ ತಾರತಮ್ಯವು ದೇಶದ ಎಲ್ಲಕ್ಕಿಂತ ಹೆಚ್ಚಾಗಿ ತಮಿಳುನಾಡಿನಲ್ಲಿ ಅತಿರೇಕವಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ DMK ಸರ್ಕಾರ ವಿರುದ್ಧ ರವಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಗಣೇಶೋತ್ಸವಕ್ಕೆ ಜೂನಿಯರ್ ಧ್ರುವ ಸರ್ಜಾ ಎಂಟ್ರಿ : ಫಲಿಸಿದ ಪೂಜಾಫಲ!
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಜಾತಿ ಪಟ್ಟಿ ಧರಿಸಿರುವುದು, ದಲಿತರು ಬಳಸುವ ನೀರಿನ ತೊಟ್ಟಿಯಲ್ಲಿ ಮಾನವ ಮಲವಿಸರ್ಜನೆ, ದೇವಸ್ಥಾನಗಳಿಗೆ ಒಂದು ವರ್ಗದವರಿಗೆ ಅನುಮತಿ ನಿರಾಕರಿಸುವುದು ಮುಂತಾದ ವರದಿಗಳನ್ನು ಓದಿದ್ದೇನೆ, ಅಂಥಾ ವರದಿಗಳು ನನಗೆ ಸಿಕ್ಕಿದೆ. ಇದೆಲ್ಲವೂ ರಾಜ್ಯದಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ಪ್ರತಿಬಿಂಬಿಸುತ್ತದೆ.
ಈ ಅನಿಷ್ಟ ಪದ್ಧತಿಯನ್ನು ಸಮಾಜ ಸುಧಾರಣೆಯಿಂದ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯವೇ ಹೊರತು ಮತ ಬ್ಯಾಂಕ್ ರಾಜಕಾರಣದಿಂದಲ್ಲ ಎಂದು ಅವರು ಹೇಳಿದ್ದಾರೆ.