Wednesday, January 22, 2025

ಸಿಲಿಕಾನ್ ಸಿಟಿಯಲ್ಲಿ ಗರಿಗೆದರಿದ ಗೌರಿ ಗಣೇಶ ಹಬ್ಬದ ವ್ಯಾಪಾರ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಗಣೇಶ ಚತುರ್ಥಿಯ ಹಿನ್ನೆಲೆ ಹೂ-ಹಣ್ಣುಗಳ ವ್ಯಾಪಾರ ತುಂಬಾ ಜೋರಾಗಿ ನಡೆಯುತ್ತಿದೆ.

ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೂ- ಹಣ್ಣುಗಳ ಖರೀದಿಯಲ್ಲಿ ಬ್ಯೂಸಿಯಾಗಿರುವ ಬೆಂಗಳೂರಿನ ಜನರು. ನಾಳೆ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆ ಮಾಡುಕಟ್ಟೆಗಳಲ್ಲಿ ಜನಸಾಮಾನ್ಯರಿಗೆ ಕೈಗೆಟಕುವಂತ ಬಗೆಬಗೆಯ ಹೂವುಗಳು ಹಾಗೂ ಹಣ್ಣುಗಳು.

ಇದನ್ನು ಓದಿ : ಅಕೌಂಟ್​ ಹ್ಯಾಕ್​ ಮಾಡಿ 40 ಲಕ್ಷ ರೂ. ವಂಚಸಿ ಆರೋಪಿ ಎಸ್ಕೇಪ್​ !

ಸಿಲಿಕಾನ್ ಸಿಟಿಯ ಯಶವಂತಪುರದಲ್ಲಿ ಹೂವಿನ ಮಾರ್ಕೆಟ್​ನಲ್ಲಿ ಹೂ -ಹಣ್ಣುಗಳ ಖರೀದಿ ಭರಾಟೆ ಜೋರಿನಲ್ಲಿ ನಡೆಯುತ್ತಿದ್ದು, ಹೂವಿನ ಬೆಲೆಯನ್ನು ನೋಡುವುದಾದರೆ ಈ ಕೆಳಗಿನಂತಿದೆ ನೋಡಿ.

  • ಮಲ್ಲಿಗೆ ಹೂವು – 60 ರೂ.(ಮೊಳ)
  • ಕನಕಾಂಬರ – 60 ರೂ. (ಮೊಳ)
  • ಸೇವಂತಿಗೆ –  80 ರೂ. (ಮಾರು)
  • ತುಳಸಿ ಮಾಲೆ – 80 ರೂ. (ಮಾರು)
  • ಹೂವಿನ ಹಾರ – 120 (1ಕ್ಕೆ)
  • ಚೆಂಡು ಹೂ – 50 ರೂ. (ಮಾರು)
  • ಮಾವಿನ ಎಲೆ – 30 ರೂ. (1 ಕಟ್ಟು)

ಈ ರೀತಿಯ ಬೆಲೆಯಲ್ಲಿ ಹೂವುಗಳು ಮಾರಾಟವಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ಹೂ ಹಣ್ಣು ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿರುವುದು ಜನರಲ್ಲಿ ಕೊಂಚ ಸಂತೋಷ ಮೂಡಿದೆ.

RELATED ARTICLES

Related Articles

TRENDING ARTICLES