Monday, May 20, 2024

ಲಂಕಾ ದಹನಕ್ಕೆ ‘ವಿ-ರಾ-ರೋ’ ರೆಡಿ : ಏಷ್ಯಾಕಪ್ ಕಿರೀಟಕ್ಕಾಗಿ ಭಾರತ-ಶ್ರೀಲಂಕಾ ಕದನ

ಬೆಂಗಳೂರು : ಏಷ್ಯಾಕಪ್ 2023 ಟೂರ್ನಿ ಅಂತಿಮ ಘಟ್ಟಕ್ಕೆ ಬಂದಿದೆ. ಇಂದು ಭಾರತ ಹಾಗೂ ಶ್ರೀಲಂಕಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಏಷ್ಯಾ ಕಪ್‌ ಇತಿಹಾಸದಲ್ಲಿಯೇ ಈ ಎರಡೂ ತಂಡಗಳು ಅತ್ಯಂತ ಯಶಸ್ವಿ ತಂಡಗಳಾಗಿವೆ. ಭಾರತ 7 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರೆ, ಶ್ರೀಲಂಕಾ 6 ಬಾರಿ ಚಾಂಪಿಯನ್ಸ್‌ ಆಗಿದೆ. ಸೂಪರ್‌-4ರ ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮಣಿಸಿ ಟೀಂ ಇಂಡಿಯಾ ಫೈನಲ್ ತಲುಪಿದೆ. ಎರಡನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 41 ರನ್‌ಗಳಿಂದ ಗೆದ್ದು ಫೈನಲ್‌ಗೆ ಅರ್ಹತೆ ಪಡೆದಿದೆ.

ಮತ್ತೊಂದೆಡೆ ಸ್ಟ್ರಾಂಗ್ ಪಾಕಿಸ್ತಾನ ಮೇಲೆ ಗೆದ್ದು ಶ್ರೀಲಂಕಾ ಫೈನಲ್ ತಲುಪಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳು ಏಷ್ಯಾ ಕಪ್‌ ಫೈನಲ್‌ನಲ್ಲಿ ಒಟ್ಟು 8 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ತಂಡ 5 ಬಾರಿ ಗೆಲುವು ಪಡೆದಿದ್ದರೆ, ಶ್ರೀಲಂಕಾ 3 ಬಾರಿ ಚಾಂಪಿಯನ್ಸ್ ಆಗಿದೆ.

ಕೊಲಂಬೊದಲ್ಲಿ ಭಾರತವೇ ಕಿಂಗ್!

ಕೊಲಂಬೊದ ಆರ್.ಪ್ರೇಮದಾಸ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಹಾಗೂ ಶುಭ್ಮನ್ ಗಿಲ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಕೊಲಂಬೊದಲ್ಲಿ ಆಡಿದಾಗಲ್ಲೆಲ್ಲ ವಿರಾಟ ರೂಪ ತೋರಿಸಿದ್ದು, 100ಕ್ಕಿಂತಲೂ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನೂ ವೇಗಿಗಳಾದ ಬುಮ್ರಾ, ಸಿರಾಜ್ ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್ ಲಂಕಾ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಲಿದ್ದಾರೆ.

ಭಾರಕ್ಕೆ ಲಂಕಾ ನೀಡುತ್ತಾ ಶಾಕ್!

ಫೈನಲ್ ಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದೆ. ಪ್ರಮುಖ ಸ್ಪಿನ್ನರ್ ಮಹೇಶ್ ತಿಕ್ಷಣ ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ. ಒಟ್ಟು 5 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮಹೀಶ್ ತೀಕ್ಷಣ 8 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಉಳಿದಂತೆ ಬ್ಯಾಟರ್ ಮೆಂಡಿಸ್ ಫಾರಂನಲ್ಲಿದ್ದು ಭಾರತ ತಂಡಕ್ಕೆ ತಲೆನೋವಾಗಬಹುದು.

ಕೊಲಂಬೊದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಫೈನಲ್ ಮ್ಯಾಚ್ ವೇಳೆಯೂ ವರುಣ ಕಾಡಬಹುದು. ರಿಸರ್ವ್ ಡೇ ಇದ್ದು ಮಳೆ ಬಂದ್ರೆ ಸೋಮವಾರ ನಡೆಯಲಿದೆ.

RELATED ARTICLES

Related Articles

TRENDING ARTICLES