Saturday, June 1, 2024

ಡಿಜಿಟಲೀಕರಣದತ್ತ ರಾಜ್ಯದ ಪೊಲೀಸ್​ ಠಾಣೆಗಳು

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಪೊಲೀಸ್​ ಠಾಣೆಗಳನ್ನು ಡಿಜಿಟಲೀಕರಣ ಮಾಡುತ್ತೇವೆ. ಡಿಜಿಟಲೀಕರಣ ಮಾಡಿದರೆ ಎಲ್ಲೇ ದೂರು ದಾಖಲಾದರೂ ನೋಡಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಬರುವವರ ಜೊತೆ ಪೊಲೀಸರು ಸೌಜನ್ಯದಿಂದ ವರ್ತಿಸಬೇಕು. ಠಾಣೆಗೆ ಯಾರೇ ಬಂದರೂ ಸಂಯಮದಿಂದ ಮಾತನಾಡುವಂತೆ ಹೇಳಿದ್ದೇವೆ. ದೂರು ನೀಡಲು ಬಂದವರಿಗೆ ಧೈರ್ಯ ತುಂಬಿದರೆ ಅವರು ಖುಷಿಯಾಗುತ್ತಾರೆ ಎಂದರು.

ಇದನ್ನೂ ಓದಿ: ಕುಕ್ಕರ್​ ಬಾಂಬ್​ ಸ್ಪೋಟ: ಕದ್ರಿ ದೇವಾಲಯವೇ ಅರಾಫತ್ ಅಲಿ ಗುರಿ

ಎಲ್ಲೋ ಏನೋ ಅಪರಾಧ ನಡೆದರೆ SP ಹೊಣೆ ಮಾಡುವುದು ನಡೆದುಬಂದಿದೆ. ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅವರನ್ನು ಹೊಣೆ ಮಾಡುತ್ತೇವೆ. ಇನ್ಮುಂದೆ ಇದೆಲ್ಲ ಆಗಬಾರದು ಎಂದರೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು ಎಂದು ಹೇಳಿದ್ದಾರೆ.

ಶಾಂತಿ ಸುವ್ಯವಸ್ಥೆ ಇರಬೇಕೆಂದರೆ ಪೊಲೀಸರು ಹಗಲಿರುಳು ಕೆಲಸ ಮಾಡಬೇಕು. ಎಸ್​ಪಿ ದರ್ಜೆಗಿಂತ ಮೇಲಿನ ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಿದ್ದೇವೆ. ಸರ್ಕಾರದ ದೃಷ್ಟಿಕೋನದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.

RELATED ARTICLES

Related Articles

TRENDING ARTICLES