Sunday, December 22, 2024

ವಿವಾದಿತ ಸ್ಥಳದಲ್ಲಿ ಗಣೇಶ ಕೂರಿಸಬಾರದು ; ಬಿ. ದಯಾನಂದ್

ಬೆಂಗಳೂರು : ಗೌರಿ ಗಣೇಶ ಆಚರಣೆಯ ಹಿನ್ನೆಲೆ ನಗರದಲ್ಲಿ ಶಾಂತಿಯುತವಾಗಿ ಆಚರಣೆ ಮಾಡಬೇಕೆಂದು ನಗರದ ಪೋಲಿಸ್ ಆಯುಕ್ತ ಬಿ. ದಯಾನಂದ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಶಾಂತಿಯುತವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಬೇಕು. ಏರಿಯಾಗಳಲ್ಲಿ ಗಣೇಶ ಕೂರಿಸುವ ವಿಚಾರದಲ್ಲಿ ಜಗಳವಾಡಬಾರದು. ಈ ಭಾರಿ ಗಣೇಶನ ನೆಪದಲ್ಲಿ ಹಪ್ತಾ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಅಷ್ಟೇ ಅಲ್ಲ ಸಾರ್ವಜನಿಕರ ಸ್ಥಳಗಳಲ್ಲಿ ಹಾಗೂ ಟ್ರಾಫಿಕ್ ಏರಿಯಾದಲ್ಲಿ ಗಣೇಶನನ್ನು ಕೂರಿಸಬಾರದು. ಒಂದು ಕೂರಿಸಿದರು ಆಯಾ ಪೋಲಿಸ್ ಠಾಣೆಯಿಂದ ಅನುಮತಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಮತ್ತು ವಿವಾದಿತ ಸ್ಥಳದಲ್ಲಿ ಕೂರಿಸಬಾರದು, ಹಾಗೆಯೇ ಗಣೇಶ ಕೂರಿಸುವ ಜಾಗದಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಹಾಕಬೇಕು ಎಂದು ಪೋಲಿಸ್ ದಯಾನಂದ್ ಅವರು ಹೇಳಿದ್ದಾರೆ.

ಇದನ್ನು ಓದಿ : ಎಸ್ಸಿ-ಎಸ್ಟಿ, ಮುಸ್ಲಿಂ, ಲಿಂಗಾಯತರಿಗೆ ಡಿಸಿಎಂ ಸ್ಥಾನ ಕೊಡಬೇಕು : ಕೆ.ಎನ್. ರಾಜಣ್ಣ

ಇನ್ನೂ ಬ್ಯಾರಿಕೇಡ್ ವಿಚಾರಕ್ಕೆ ಬಂದರೆ ಬ್ಯಾರಿಕೇಡ್​ಗಳನ್ನು ಸಾರ್ವಜನಿಕರಿಗೆ ದರ್ಶನ ಮಾಡಲು ಅನುವು ಮಾಡಿಕೊಡಬೇಕು. ಗಣೇಶನನ್ನು ನೋಡಲು ಬಂದ ಹೆಣ್ಣು ಮಕ್ಕಳನ್ನು ಚೂಡಾಯಿಸುವುದು ಹಾಗೂ ಕೀಟಲೆ ಮಾಡಿದ್ರೆ, ಆ ವಿಚಾರಕ್ಕೆ ಆಯೋಜಕರೇ ಕಾರಣರಾಗಿರುತ್ತಾರೆ ಎಂದು ಕಟ್ಟು ನಿಟ್ಟಾಗಿ ಸೂಚನೆಯನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES