Tuesday, May 21, 2024

7,000 ಲಂಚ ಪಡೆದ ಆಹಾರ ಸುರಕ್ಷತಾ ಅಧಿಕಾರಿ ‘ಲೋಕಾ’ ಬಲೆಗೆ

ಮೈಸೂರು : 7,000 ರೂಪಾಯಿ ಲಂಚ ಪಡೆದ ಆಹಾರ ಸುರಕ್ಷತಾ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್​ ಹ್ಯಾಂಡ್​ ಆಗಿ ಬಂಧಿಸಿದ್ದಾರೆ.

ಲೋಕೇಶ್‌ ಲೋಕಾಯುಕ್ತ ಬಲೆಗೆ ಬಿದ್ದ ಆಹಾರ ಸುರಕ್ಷತಾ ಅಧಿಕಾರಿ. ಮೈಸೂರಿನ ತಿಲಕ್ ನಗರ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಈತ ಸಿಕ್ಕಿಬಿದ್ದಿದ್ದಾನೆ. ಅಂಗಡಿ ಲೈಸೆನ್ಸ್ ರಿನವಲ್ ಮಾಡಿಕೊಡಲು ಲಂಚ ಪಡೆದಿದ್ದಾನೆ.

ನಂಜನಗೂಡಿನ ರಘು ಎಂಬುವವರ ಬಳಿ 7 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗೂಗಲ್‌ ಪೇ‌ ಮೂಲಕ ರಘು ಬಳಿ 7 ಸಾವಿರ ರೂಪಾಯಿ ವರ್ಗಾವಣೆ ಮಾಡಿಸೊಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಇದೇ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಹಾಗೂ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

2ನೇ ಬಾರಿ ಲೋಕಾ ಬಲೆಗೆ

ಕಚೇರಿಯಲ್ಲಿದ್ದಾಗಲೇ ಟ್ರ್ಯಾಪ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಲೋಕೇಶ್​ರನ್ನು ವಶಕ್ಕೆ ಪಡೆದಿದ್ದಾರೆ. ಈತನ ಮೇಲೆ ರೇಡ್​ ಆಗಿರುವುದು ಇದೇ ಮೊದಲಲ್ಲ. 2015ರಲ್ಲೂ ಲೋಕೇಶ್ ಮೇಲೆ ದಾಳಿ ಮಾಡಲಾಗಿತ್ತು. ಇದೀಗ ಎರಡನೇ ಬಾರಿ ಮತ್ತೆ ಲಂಚ ಪಡೆದು ಲೋಕೇಶ್ ಲೋಕಾ ಅಧಿಕಾರಿಗಳ ಅತಿಥಿಯಾಗಿದ್ದಾನೆ.

RELATED ARTICLES

Related Articles

TRENDING ARTICLES