Saturday, May 18, 2024

ಪಾಕ್ ಸಂಹಾರ.. ಪಾಕಿಸ್ತಾನ ಹುಟ್ಟಡಗಿಸಿ ಫೈನಲ್​ಗೆ ಲಗ್ಗೆ ಇಟ್ಟ ಲಂಕಾ

ಬೆಂಗಳೂರು : ವಾವ್​.. ತನ್ನದೇ ನೆಲದಲ್ಲಿ ಪಾಕಿಸ್ತಾನ ಸಂಹಾರ ಮಾಡಿದ ಲಂಕಾ. ಲಂಕಾ ವಿರುದ್ಧ ಗೆದ್ದು ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ತೊಡೆ ತಟ್ಟುತ್ತೇವೆ ಎಂದು ಬೀಗುತ್ತಿದ್ದ ಪಾಕ್​ ಪಕ್ಕೆಲುಬು ಮುರಿದಿದೆ.

ಹೌದು, ಏಷ್ಯಾಕಪ್ ಸೂಪರ್​-4 ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕ್​ ವಿರುದ್ಧ ಶ್ರೀಲಂಕಾ 2 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಪಾಕಿಸ್ತಾನ ಮಳೆರಾಯನ ವರ ಪಡೆಯಲು ಮೊದಲು ಬ್ಯಾಟ್​ ಬೀಸಿತು. 42 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 253 ರನ್​ ಗಳಿಸಿತು. ಪಾಕ್ ಪರ ರಿಜ್ವಾನ್ ಅಜೇಯ 86*, ಅಬದುಲ್ಲಾ ಶಫೀಕ್ 52 ಹಾಗೂ ಇಫ್ತಿಯರ್ ಅಹಮದ್ 47 ರನ್​ಗಳ ನೆರವಿನಿಂದ ಲಂಕಾಗೆ 253 ರನ್​ಗಳ ಬಿಗ್ ಟಾರ್ಗೆಟ್ ಸೆಟ್​ ಮಾಡಿತು. ಲಂಕಾ ಪರ ಪತಿರಣ 3 ಹಾಗೂ ಪ್ರಮೋದ್ ಮದುಶನ್ 2 ವಿಕೆಟ್ ಕಬಳಿಸಿದರು.

253 ರನ್​ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ 42 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು ಯಶಸ್ವಿಯಾಗಿ ಗುರಿ ಮುಟ್ಟಿತು. ಇದರೊಂದಿಗೆ ಅಂತಿಮ ಪಂದ್ಯವನ್ನು ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕ್​ ಜೊತೆ ಆಡುವ ಕನಸು ಕನಸಾಗಿಯೇ ಉಳಿಯಿತು. ಫೈನಲ್​ನಲ್ಲಿ ಲಂಕಾ ಹಾಗೂ ಭಾರತದ ನಡುವೆ ಟ್ರೋಫಿಗಾಗಿ ಕಾಳಗ ನಡೆಯಲಿದೆ.

RELATED ARTICLES

Related Articles

TRENDING ARTICLES