Saturday, May 4, 2024

ಮಾನ್ಸೂನ್ ಮಳೆ ವಿಫಲವಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು ; ಬಸರಾಜ್ ಬೊಮ್ಮಾಯಿ

ಮಂಗಳೂರು : ಮನ್ಸೂನ್ ಪೂರ್ವದ ಮಳೆ ವಿಫಲವಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು, ಈಗ ಬರಗಾಲ ಉಂಟಾಗಿದೆ ಇದರಿಂದ ಜನರಿಗೆ ಯಾವುದೇ ಸಹಾಯ ಮಾಡಲು ಆಗಲ್ಲ ಎಂದು ಬಸರಾಜ್ ಬೊಮ್ಮಯಿ ಅವರು ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಬಸರಾಜ್ ಬೊಮ್ಮಯಿ ಅವರು ನಮ್ಮ ಅವಧಿಯಲ್ಲಿ ಪ್ರವಾಹದ ಪರಿಸ್ಥಿತಿ ಸಂದರ್ಭದಲ್ಲಿ ಒಂದು ತಿಂಗಳಲ್ಲೇ ಪರಿಹಾರ ಕೊಟ್ಟಿದ್ದೇವೆ. ಆದರೆ ಇವರು ಮಳೆ ವಿಫಲವಾದಗ ಸರ್ಕಾರ ಎಚ್ಚೆತ್ತುಕೊಂಡಿದ್ದರೇ ಈ ಪರಿಸ್ಥಿತಿ ಬರುತ್ತೀರಲಿಲ್ಲ. ಬರಗಾಲ ಘೋಷಣೆಯನ್ನು ವಿಳಂಬ ಮಾಡಿ, ಸರ್ಕಾರ ವರದಿ ಪಡೆಯುವಲ್ಲಿ ವಿಳಂಬ ಮಾಡಿದ್ದಾರೆ. ಅದರಿಂದ ಈಗ ಮುಂಗಾರು ಹೋಗಿದೆ, ರೈತರಿಗೆ ಸಕಾಯವನ್ನು ನಾವು ಮಾಡಲು ಆಗಲ್ಲ ಎಂದು ಬೊಮ್ಮಯಿ ಅವರು ಹೇಳಿದ್ದಾರೆ.

ಇದನ್ನು ಓದಿ : ಸಕ್ಕರೆನಾಡಲ್ಲಿ ದರೋಡೆ ಮಾಡುತ್ತಿದ್ದ ಹೈಟೆಕ್ ಕಳ್ಳರ ಬಂಧನ..!

ಇನ್ನೂ ಹೇಳಬೇಕು ಅಂದರೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮನೋಭಾವ ಈ ಸರ್ಕಾರಕ್ಕೆ ಇಲ್ಲ, ಅದನ್ನು ಬಿಟ್ಟು ಕುಂಟು ನೆಪವನ್ನು ಹೇಳುತ್ತಾ ಸರ್ಕಾರ ಕಾಲ ಕಳೆಯುತ್ತಿದ್ದಾರೆ. ಕಾವೇರಿ ವಿಚಾರದಲ್ಲೂ ಮೊದಲಿನಿಂದಲೂ ನಾವು ಹೇಳಿಕೊಂಡು ಬಂದಿದ್ದೇವೆ, ತಮಿಳುನಾಡಿನ ಡ್ಯಾಂಗಳಲ್ಲಿ ನೀರಿನ ಸ್ಟಾಕ್ ಹೆಚ್ಚಾಗಿದೆ ಆದರೂ ರಾಜ್ಯ ಸರ್ಕಾರ ನೀರು ಬಿಡ್ತಾ ಇತ್ತು. ಆದರೆ ಸುಮಾರು 25 ಸಾವಿರ ಕೋಟಿ ಸಾಲದ ಬದಲು ರೈತರಿಗೆ ಏಳು ಸಾವಿರ ಕೋಟೊ ಅಷ್ಟೇ ಕೊಟ್ಟಿದ್ದಾರೆ. ಈ ಹಿನ್ನೆಲೆ ಕಾನೂನಾತ್ಮಕವಾಗಿ ಗಂಭೀರವಾಗಿ ತೆಗೆದುಕೊಂಡು ಸರ್ಕಾರ ಹೋರಾಟ ಮಾಡ್ತಾ ಇಲ್ಲ, ಹೀಗಾಗಿ ಕಾವೇರಿ ಜಲಾಯನ ರೈತರಿಗೆ ಹಾಗೂ ಬೆಂಗಳೂರು ಜನರಿಗೆ ಕಷ್ಟವಾಗುತ್ತಿದೆ ಎಂದು ಹೇಳಿದರು.

ಅಷ್ಟೇ ಅಲ್ಲ ಇವತ್ತು ಪರಿಹಾರ ಕಾನೂನಾತ್ಮಕ ಮತ್ತು ತಮಿಳನಾಡಿನ್ನು ಒಪ್ಪಿಸಬಹುದು ಆದರೆ ನಮ್ಮ ಸಿಎಂ ಅವರು ತಮಿಳುನಾಡಿನ ಸ್ಟಾಲಿನ್ ಅವರ ಜೊತೆಗೆ ಮಾತನಾಡೋಕೆ ತಯಾರಿಲ್ಲ. ಮತ್ತೆ ಮಾತನಾಡುವಾಗ ಇಂಡಿಯಾ ಒಕ್ಕೂಟ ಅಂತ ಹೇಳ್ತಾರೆ ಆದರೆ ಇವರು ನಮ್ಮ ನೀರಿನ ಹಕ್ಕಿನ ಬಗ್ಗೆ ಮಾತ್ರ ಮಾತನಾಡಲ್ಲ. ಸದ್ಯ ನೀರು ಬಿಡಲ್ಲ ಅನ್ನೋ ತಮ್ಮ ನಿಲುವಿಗೆ ಅವರು ಗಟ್ಟಿಯಾಗಿ ನಿಲ್ಲಬೇಕು, ನಾವು ಈ ನಿಲುವಿನ ಬಗ್ಗೆ ಸರ್ಕಾರದ ಜೊತೆ ನಿಲ್ಲುತ್ತೇವೆ. ಅವರು ಏನಾದರೂ ಒಂದು ವೇಳೆ ನೀರು ಬಿಟ್ಟಿರೆ ನಾವು ಸರ್ಕಾರದ ವಿರುದ್ಧ ಹೋರಾಡ್ತೀವಿ ಎಂದು ಬಸರಾಜ್ ಬೊಮ್ಮಯಿ ಅವರು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES