Monday, June 17, 2024

ಕೊಲಂಬೋದಲ್ಲಿ ಸೂರ್ಯ ಪ್ರಕಾಶಮಾನವಾಗಿ ಬೆಳಗಲಿ : ಸಚಿನ್ ಪ್ರಾರ್ಥನೆ

ಬೆಂಗಳೂರು : ‘ಕೊಲಂಬೊದಲ್ಲಿ ಸೂರ್ಯನು ಪ್ರಕಾಶಮಾನವಾಗಿ ಬೆಳಗಲಿ’ ಎಂದು ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಪ್ರಾರ್ಥಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಸಚಿನ್ ಕೊಲೊಂಬೊಗೆ ತೆರಳಿದ್ದಾರೆ. ಆದರೆ, ನಿನ್ನೆ ಮಳೆಯಿಂದಾಗಿ ಪಂದ್ಯ ಮುಂದೂಡಲಾಗಿತ್ತು. ಮೀಸಲು ದಿನವಾದ ಇಂದು ಪಂದ್ಯ ಮುಂದುವರಿಯಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಕ್ರಿಕೆಟ್ ದೇವರು ಸಚಿನ್, ಇಂದು ಕೂಡ ಕೊಲಂಬೊದಲ್ಲಿ ಸೂರ್ಯನು ಪ್ರಕಾಶಮಾನವಾಗಿ ಪ್ರಜ್ವಲಿಸಲಿ ಎಂದು ಹೇಳಿದ್ದಾರೆ. ಅಲ್ಲದೇ, ಮರವೊಂದರ ಕೆಳಗೆ ನಿಂತು ಆಕಾಶದ ಕಡೆ (ಸೂರ್ಯನ ಕಡೆ) ನೋಡುತ್ತಿರುವ ಫೋಟೋವನ್ನು ಸಚಿನ್ ತೆಂಡೂಲ್ಕರ್ ಪೋಸ್ಟ್​ ಮಾಡಿದ್ದಾರೆ.

ಇನ್ನೂ, ಇಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿತ್ತು. ಆದರೆ, ಬೆಳಗ್ಗೆಯಿಂದ ಬಿಡದೇ ಸುರಿಯುತ್ತಿರುವ ಮಳೆ ಕಾರಣದಿಂದ ಇನ್ನೂ ಪಂದ್ಯ ಆರಂಭವಾಗಿಲ್ಲ.

RELATED ARTICLES

Related Articles

TRENDING ARTICLES