Sunday, May 19, 2024

ಅರಮನೆ ಮೈದಾನದಲ್ಲಿ ಇಂದು JDS ಮಹತ್ವದ ಸಮಾವೇಶ!

ಬೆಂಗಳೂರು : ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್​ ಪಕ್ಷದ ಸಮಾವೇಶ ಆಯೋಜಿಸಲಾಗಿದ್ದು ಸಮಾವೇಶದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸಲುವಾಗಿ ಇಂದಿನ ಸಭೆಯೂ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ನಟ ಪವನ್​ ಕಲ್ಯಾಣ್​ ಅರೆಸ್ಟ್​!

ಅರಮನೆ ಮೈದಾನದಲ್ಲಿ ಬೆಳಗ್ಗೆ 10.30ಕ್ಕೆ ಸಮಾವೇಶ ಆರಂಭವಾಗಲಿದ್ದು ಜೆಡಿಎಸ್​ ವರಿಷ್ಠರು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ, ಸಿ.ಎಂ ಇಬ್ರಾಹಿಂ ಮತ್ತು ಜಿಟಿಡಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

JDS ಹಾಲಿ ಶಾಸಕರು, ಸಂಸದ, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ ಜೊತೆಗೆ ಘಟಕಗಳ ಪದಾಧಿಕಾರಿ, ಕಾರ್ಯಕರ್ತರಿಗೆ ಆಹ್ವಾನ ನೀಡಲಾಗಿದೆ. ಹೀಗಾಗಿ ಜೆಡಿಎಎಸ್​ ಸಮಾವೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ.

ಈ ಸಭೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುತ್ತದೆ. ಹಾಗೆಯೇ ಬಿಜೆಪಿ ಜೊತೆ ಸಖ್ಯ ಬೇಕಾ. ಬೇಡ್ವಾ? ಮೈತ್ರಿಯ ಸಾಧಕ-ಬಾಧಕಗಳೇನು? ಒಂದು ವೇಳೆ ಮೈತ್ರಿಗೆ ಒಪ್ಪಿದರೆ ಯಾವ ಯಾವ 4 ಕ್ಷೇತ್ರಗಳನ್ನ ಕೇಳಬೇಕೇಂಬ ಬಗ್ಗೆ ಚರ್ಚಿ ನಡೆಯಲಿದೆ.

RELATED ARTICLES

Related Articles

TRENDING ARTICLES