Monday, May 13, 2024

ನಾಳೆ ಇಂಡೋ-ಪಾಕ್ ಕಾಳಗ : ರಾಹುಲ್ ಇನ್, ಔಟ್ ಯಾರು?

ಬೆಂಗಳೂರು : ಏಷ್ಯಾಕಪ್​​​ನ ಸೂಪರ್-4 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 10ರಂದು ಮುಖಾಮುಖಿಯಾಗುತ್ತಿವೆ.

ಈ ಪಂದ್ಯ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ಈ ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಪ್ರಶ್ನೆ ಎದ್ದಿದೆ. ಕಾರಣ, ಶ್ರೀಲಂಕಾದ ರಾಜಧಾನಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದು.

ಮಳೆಯ ಮನ್ಸೂಚನೆಯನ್ನು ಗಮನಿಸಿರುವ ಎಸಿಸಿ, ಈ ಉಭಯ ತಂಡಗಳ ಕಾಳಗಕ್ಕೆ ಮೀಸಲು ದಿನವನ್ನು ನಿಗದಿಪಡಿಸಿದೆ. ಹೀಗಾಗಿ, ಸೆಪ್ಟಂಬರ್ 10 ರಂದು ಪಂದ್ಯ ಪೂರ್ಣಗೊಳ್ಳದಿದ್ದರೆ, ಸೆ.11 ರಂದು ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.

ಟಾಸ್ ಪ್ರಕ್ರಿಯೆ : ಮಧ್ಯಾಹ್ನ 2.30 ಗಂಟೆಗೆ

ಪಂದ್ಯ ಆರಂಭ : ಮಧ್ಯಾಹ್ನ 3 ಗಂಟೆಗೆ

ಸ್ಥಳ : ಪ್ರೇಮದಾಸ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಕೊಲಂಬೊ

ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ(ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ / ಕೆ.ಎಲ್ ರಾಹುಲ್, ಇಶಾನ್ ಕಿಶನ್(ವಿ.ಕೀ), ಹಾರ್ದಿಕ್ ಪಾಂಡ್ಯ(ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ / ಮೊಹಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್

ಪಾಕಿಸ್ತಾನ ಸಂಭಾವ್ಯ ತಂಡ

ಬಾಬರ್ ಅಜಂ (ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್

RELATED ARTICLES

Related Articles

TRENDING ARTICLES