Wednesday, May 1, 2024

ಚಂದ್ರಯಾನ-3 ಬಗ್ಗೆ ಇಸ್ರೋದಿಂದ ಬಿಗ್ ಅಪ್ಡೇಟ್

ಬೆಂಗಳೂರು : ಚಂದ್ರಯಾನ-3 ಬಗ್ಗೆ ಇಸ್ರೋ ವಿಜ್ಞಾನಿಗಳು ಮತ್ತೊಂದು ಬಿಗ್ ಅಪ್ಡೇಟ್ ನೀಡಿದ್ದಾರೆ. ಚಂದ್ರಯಾನ-3 ಬಗ್ಗೆ ಮತ್ತೊಂದು ಫೋಟೋವನ್ನು ಇಸ್ರೋ ಹಂಚಿಕೊಂಡಿದೆ.

ಚಂದ್ರಯಾನ-2 ಆರ್ಬಿಟರ್​ನಿಂದ ಡ್ಯುಯಲ್ ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡರ್​ನಿಂದ ಕ್ಲಿಕ್ಕಿಸಿರುವ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಿತ್ರವನ್ನು ಇಂದು ಇಸ್ರೋ ಬಿಡುಗಡೆ ಮಾಡಿದೆ.

ಈ ಫೋಟೋ ಸೆಪ್ಟಂಬರ್ 6ರಂದು ತೆಗೆಯಲಾಗಿದೆ ಎಂದು ಹೇಳಿದೆ. ಕೆಲವು ದಿನಗಳ ಹಿಂದೆ ಲ್ಯಾಂಡರ್ ಹಾಗೂ ರೋವರ್ ಅನ್ನು ಸ್ಲೀಪಿಂಗ್ ಮೋಡ್​ಗೆ ಇಸ್ರೋ ಕಳುಹಿಸಿತ್ತು. ಚಂದ್ರಯಾನ-2 ಆರ್ಬಿಟರ್ ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಈ ಹಿಂದೆ ಹೇಳಿತ್ತು. ಇದೀಗ, ಆರ್ಬಿಟರ್ ಕ್ಲಿಕ್ಕಿಸಿದ ಫೊಟೋ ಹಂಚಿಕೊಂಡಿದೆ.

RELATED ARTICLES

Related Articles

TRENDING ARTICLES