Wednesday, November 20, 2024

ಗ್ಯಾರಂಟಿನೇ ಮುಖ್ಯ : ಅರ್ಧ ಶೈಕ್ಷಣಿಕ ವರ್ಷ ಕಳೆದರೂ ಮಕ್ಕಳಿಗಿಲ್ಲ ಶೂ ಭಾಗ್ಯ!

ಬೆಂಗಳೂರು : ಬಿಬಿಎಂಪಿಯ ಅಧಿಕಾರಿಗಳಿಗೆ ತನ್ನ ಅಧೀನದಲ್ಲಿ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಲು ಆಗ್ತಿಲ್ಲ. ಹಾಗಾದ್ರೆ ಇನ್ನೂ ಬೆಂಗಳೂರು ನಗರದ ಜನರ ಸಮಸ್ಯೆಯನ್ನು ಬೆಂಗಳೂರು ಮಹಾನಗರ ಪಾಲಿಕೆ ಹೇಗೆ ನಿವಾರಿಸುತ್ತೆ ಅನ್ನೋ ಅನುಮಾನ ಶುರುವಾಗಿದೆ.

ಬಿಬಿಎಂಪಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಅಂದ್ರೆ ಪಾಲಿಕೆಗೆ ಒಂದು ರೀತಿಯ ಅಸಡ್ಡೆ. ನೂರಾರು ಕೋಟಿ ಬಜೆಟ್‌ನಲ್ಲಿ ಹಣ ಇಟ್ರು, ಖರ್ಚು ಮಾತ್ರ ಮಾಡಲ್ಲ. ಮಕ್ಕಳಿಗೆ ಕೊಡಬೇಕಾಗಿರೋ ಮೂಲಭೂತ ಸೌಕರ್ಯಗಳನ್ನೂ ನೀಡೋದಕ್ಕೆ ಹಿಂದು ಮುಂದು ನೋಡ್ತಾರೆ. ಈ ಮಧ್ಯೆ ಅರ್ಧ ಶೈಕ್ಷಣೆಕ ವರ್ಷ ಕಳೆದರೂ ಮಕ್ಕಳಿಗೆ ಇನ್ನೂ ಬಿಬಿಎಂಪಿ ಶೂ ಭಾಗ್ಯ ಕರುಣಿಸಿಲ್ಲ.

ಗ್ಯಾರಂಟಿ ಜಾರಿಗೆ ಪ್ರಾಮುಖ್ಯತೆ?

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕೇವಲ ಗ್ಯಾರಂಟಿ ಯೋಜನೆ ಜಾರಿಗೆ ತರೋದಕ್ಕೆ ಮಾತ್ರ ಪ್ರಾಮುಖ್ಯತೆ ಕೊಡ್ತಿದೆ. ಆದ್ರೆ, ಯಾವುದೇ ಆಭಿವೃದ್ಧಿ ಕಾರ್ಯಗಳನ್ನೂ ಮಾಡದೇ ಸುಮ್ಮನೆ ಕಾಲಹಾರಣ ಮಾಡ್ತಿದೆ. ಇತ್ತ ಶಾಲಾ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು ಇನ್ನೂ ಸಿಕ್ಕಿಲ. ಅದರಲ್ಲೂ ಶಾಲೆ ಆರಂಭವಾಗಿ 4 ತಿಂಗಳು ಕಳೆದರೂ ಮಕ್ಕಳಿಗೆ ಕೊಡಬೇಕಿದ ಶೂಗಳನ್ನ ಇನ್ನೂ ಕೊಟ್ಟಿಲ್ಲ.

ಇದನ್ನೂ ಓದಿ : ಶಿಕ್ಷಣ ವಂಚಿತ ಗ್ರಾಮವೀಗ ‘ಶಿಕ್ಷಕರ ತವರೂರು’ : ಅದುವೇ ಈ ‘ಇಂಚಲ ಗ್ರಾಮ’

ನಿತ್ಯ ಒಂದೊಂದು ಸಬೂಬು

ಗ್ಯಾರಂಟಿ ಯೋಜನೆಗಳಿಗೆ ಆದಾಯ ಹೆಚ್ಚಿಸಲು ಪ್ಲ್ಯಾನ್ ಮಾಡಿರೋ ಪಾಲಿಕೆ, ಮಕ್ಕಳಿಗೆ ಶೂ ಕೊಡೋದಕ್ಕೆ ಆಗ್ತಿಲ್ವಾ? ಅನ್ನೋ ಮಾತು ಕೇಳಿ ಬರ್ತಿದೆ. ಇನ್ನೂ ಇದೀಗ ಟೆಂಡರ್ ಕರೆದಿದ್ದೇವೆ ಇನ್ನೊಂದು ತಿಂಗಳೂಳಗೆ ಕೊಡ್ತೇವೆ ಅಂತ ಪಾಲಿಕೆ ಆಯುಕ್ತರು ನಿತ್ಯ ಒಂದೊಂದು ಸಬೂಬು ಹೇಳ್ತಿದ್ದಾರೆ.

ಒಟ್ಟಾರೆ, ಈ ಬಿಬಿಎಂಪಿ ಅಧಿಕಾರಿಗಳು ಬಡ ವಿದ್ಯಾರ್ಥಿಗಳ ವಿಷಯದಲ್ಲಿರುವ ಬೇಜಾವ್ದಾಬಾರಿ ಎಂಥದ್ದು ಅನ್ನೋದು ಇದರಲ್ಲೇ ಗೊತ್ತಾಗ್ತಿದೆ. ಜೊತೆಗೆ ಈ ಪಾಲಿಕೆ ಶಾಲೆಯಲ್ಲಿ ಓದುವ ಬಡಮಕ್ಕಳ ವಿದ್ಯಾಭ್ಯಾಸಕ್ಕೂ ಸರ್ಕಾರ ಈ ರೀತಿ ನಿರ್ಲಕ್ಷ್ಯ ಮಾಡ್ತಿದೆ ಅಂದ್ರೆ, ಬೇರೆ ಅಭಿವೃದ್ಧಿ ಕಾರ್ಯಗಳು ಹೇಗೆ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡ್ತಿದೆ.

RELATED ARTICLES

Related Articles

TRENDING ARTICLES