Wednesday, May 1, 2024

31 ಲಕ್ಷ ವಾಟ್ಸಾಪ್ ಅಕೌಂಟ್ ಬ್ಯಾನ್!

ಬೆಂಗಳೂರು : 31 ಲಕ್ಷದ 8 ಸಾವಿರ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ಮಾಹಿತಿ ನೀಡಿದೆ.

ಇಂಟರ್‌ನೆಟ್‌, ಸ್ಮಾರ್ಟ್‌ಫೋನ್ ಬಳಕೆದಾರರಿಗೆ ವಾಟ್ಸಾಪ್‌ ಅಪರಿಚಿತವೇನೂ ಅಲ್ಲ. ಕೋಟ್ಯಂತರ ಮಂದಿ ವಾಟ್ಸಾಪ್ ಅನ್ನು ಬಳಸುತ್ತಾರೆ. ಆದರೆ, ಕೆಲವೊಮ್ಮೆ ವಾಟ್ಸಾಪ್ ಅನ್ನು ಅಮಾಯಕರನ್ನು ವಂಚಿಸಲು ಬಳಕೆ ಮಾಡಲಾಗುತ್ತಿದೆ. ಈ ವಂಚನೆಯಿಂದ ಸಾಕಷ್ಟು ಮಂದಿ ನೊಂದಿದ್ದಾರೆ.

ಅಂತೆಯೇ, ವಾಟ್ಸಾಪ್ ತನ್ನ ‘ಭಾರತದ ಮಾಸಿಕ ವರದಿ’ಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ದೇಶದಲ್ಲಿ ತಾನು ನಿಷೇಧಿಸಿರುವ ಖಾತೆಗಳ ಸಂಖ್ಯೆ, ರಿಪೋರ್ಟ್‌ಗಳನ್ನು ಸ್ವೀಕರಿಸಿದ ಸಂಖ್ಯೆ ಮತ್ತು ಖಾತೆ ಮೇಲೆ ತೆಗೆದುಕೊಂಡ ಕ್ರಮದ ವಿವರವನ್ನು ನೀಡಿದೆ.

72 ಲಕ್ಷ ವಾಟ್ಸಾಪ್ ನಿಷೇಧ

ವರದಿಯ ಪ್ರಕಾರ ಮೆಟಾ ಮಾಲಿಕತ್ವದ ಈ ಮೆಸೆಂಜರ್‌ ಸಂಸ್ಥೆ 2023ರ ಜುಲೈ 1 ರಿಂದ ಜುಲೈ 31ರ ನಡುವೆ ಭಾರತದಲ್ಲಿ 72 ಲಕ್ಷಕ್ಕೂ ಅಧಿಕ ದುರುದ್ದೇಶಪೂರಿತ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದೆ. ಈ ತಿಂಗಳಲ್ಲಿ ಒಟ್ಟು 72 ಲಕ್ಷ 28 ಸಾವಿರ ಖಾತೆಗಳನ್ನು ವಾಟ್ಸಾಪ್ ಬ್ಯಾನ್ ಮಾಡಿದೆ. ಇದರಲ್ಲಿ ಬಳಕೆದಾರರಿಂದ ಯಾವುದೇ ರಿಪೋರ್ಟ್‌ಗಳು ಬರದೇ ಇದ್ದರೂ ಮುಂಜಾಗೃತೆಯಾಗಿ 31 ಲಕ್ಷದ 8 ಸಾವಿರ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ಹೇಳಿಕೊಂಡಿದೆ.

RELATED ARTICLES

Related Articles

TRENDING ARTICLES