Sunday, December 22, 2024

ಡ್ರಾಪ್ ನೀಡುವ ನೆಪದಲ್ಲಿ ದರೋಡೆ ; ಇಬ್ಬರ ಬಂಧನ

ಶಿವಮೊಗ್ಗ : ವ್ಯಕ್ತಿಯೊಬ್ಬನಿಗೆ ಡ್ರಾಪ್ ಕೊಡುವ ನೆಪದಲ್ಲಿ ಆ ವ್ಯಕ್ತಿಯ ಬಳಿ ದರೋಡೆ ಮಾಡಿರುವ ಹಿನ್ನೆಲೆ ಇಬ್ಬರ ಬಂಧನ ಮಾಡಿರುವ ಘಟನೆ ಭದ್ರಾವತಿಯ ಜೇಡಿಕಟ್ಟೆ ಬಳಿ ನಡೆದಿದೆ.

ಬಸ್ ನಿಲ್ದಾಣದಲ್ಲಿ ಉತ್ತರ ಪ್ರದೇಶ ಮೂಲದ ರವೀಂದ್ರ ಯಾದವ್ (39) ಎಂಬ ವ್ಯಕ್ತಿಯು ಭದ್ರಾವತಿಯಿಂದ ಮಾಚೇನಹಳ್ಳಿಗೆ ತೆರಳಲು ನಿಂತಿದ್ದರು. ಸದ್ಯ ಮಾಚೇನಹಳ್ಳಿಯಲ್ಲಿ ವಾಸವಾಗಿರುವ ಯಾದವ್. ಈ ವೇಳೆ ಭದ್ರಾವತಿಯ ಸುಲ್ತಾನ್ ಮಟ್ಟಿ ಗ್ರಾಮದ ಚೇತನ್ (21) ಮತ್ತು ಕೀರ್ತನ್ (21) ಆರೋಪಿಗಳು. ಎಂಬ ಇಬ್ಬರು ಯುವಕರು  ರವೀಂದ್ರನ ಬಳಿ ಬಂದು ಬೈಕಿನಲ್ಲಿ ಡ್ರಾಪ್ ಕೊಡುತ್ತೇವೆಂದು ಹೇಳಿ ಕರೆದುಕೊಂಡು ಹೋಗಿದ್ದ ಈ ಇಬ್ಬರು ಅಪರಿಚಿತ ವ್ಯಕ್ತಿಗಳು.

ಭದ್ರಾವತಿಯ ಜೇಡಿಕಟ್ಟೆ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಆರೋಪಿಗಳು.

ಇದನ್ನು ಓದಿ : ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸದ್ದು ಮಾಡುತ್ತಿರುವ ಡೆಂಗ್ಯೂ

ಬಳಿಕ ಯಾದವ್ ಬಳಿ ಇದ್ದ ನಗದು ಹಣ, ಎಟಿಎಂ ಕಾರ್ಡ್​ ಮತ್ತು ಮೊಬೈಲ್​ನ್ನು ದರೋಡೆ ಮಾಡಿದ್ದ ಆರೋಪಿಗಳು. ಈ ಘಟನಾ ಪರಿಣಾಮ ಯಾದವ್ ದೂರು ನೀಡಿದ್ದು, ಆ ಇಬ್ಬರು ಯುವಕರನ್ನು ಬಂಧಿಸಿದ ಭದ್ರಾವತಿ ನ್ಯೂಟೌನ್ ಪೊಲೀಸರು. ಸದ್ಯ ಬಂಧಿತರಿಂದ 11,300 ರೂ. 2 ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ಮಾಹನ ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES