Sunday, May 19, 2024

ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ : ಪ್ರಕಾಶ್ ರೈ

ಬೆಂಗಳೂರು : ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ.. ನಾನು ನಮ್ಮ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಧರ್ಮದ ವಿರುದ್ಧ ಅಲ್ಲ, ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಎಂದು ತಿಳಿಸಿದ್ದಾರೆ.

ಮೋದಿ ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಹೋಮ, ಹವನ ಮಾಡಿಸಿದ್ರು. ಅದು ನಮ್ಮ ಸಂಸತ್ ಅಲ್ಲಿ ಹೋಮ ಹವನ ಮಾಡಬಾರದು. ನಮ್ಮನ್ನ ಕೊಲ್ಲುತ್ತೇನೆ ಎಂದು ಆಯುಧಗಳನ್ನು ಹಿಡಿದು ಬರುವವರು ಹೇಡಿಗಳು. ಯಾವುದನ್ನು ನಮ್ಮ ಮೇಲೆ ಬಲವಂತವಾಗಿ ಹೇರಬಾರದು. ಆದರೆ, ಮೋದಿಯಿಂದ ಅದು ಆಗುತ್ತಿದೆ, ಅದಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಹಿಂದೂ ಧರ್ಮ ಯಾವಾಗ ಹುಟ್ಟಿತು? ಯಾರು ಹುಟ್ಟಿಸಿದ್ದರು? : ಡಾ.ಜಿ. ಪರಮೇಶ್ವರ್

ನೀನು ಸನಾತನ ಧರ್ಮ ಅಲ್ವಾ?

ನಾನು ಇಲ್ಲಿಗೆ ಬರುವ ಮೊದಲು ಖಾಸಗಿ ಚಾನಲ್ ಒಂದಕ್ಕೆ ಸಂದರ್ಶನಕ್ಕೆ ಹೋಗಿದ್ದೆ. ಅದು ಯಾವ ಚಾನಲ್? ಅದು ಅವರ ಚಾನಲ್. 30 ಜನ ಕಾವಿ ಶಾಲು ಹಾಕಿಕೊಂಡು ಬಂದಿದ್ದರು. ಅವರನ್ನು ನೋಡಿ ನಾನು ನಿಮ್ಮ ಜೊತೆ ಮಾತನಾಡಬೇಕು ಬನ್ನಿ ಅಂತ ಕರೆದೆ. ನಾನು ಟ್ವೀಟ್ ನಲ್ಲಿ ತನಾತನಿ ಸಂಸತ್ ಅಂತ ಹಾಕಿದ್ದೆ. ಅದಕ್ಕೆ ಒಬ್ಬ ಪ್ರಶ್ನೆ ಮಾಡಿ ಕೇಳಿದ. ನೀನು ಸನಾತನ ಧರ್ಮ ಅಲ್ವಾ ಅಂತ. ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ.. ನಾನು ನಮ್ಮ ಅಪ್ಪ ಅಪ್ಪನಿಗೆ ಹುಟ್ಟಿದ್ದೇನೆ ಎಂದು ಆ ಘಟನೆ ಬಗ್ಗೆ ಹಂಚಿಕೊಂಡಿದ್ದಾರೆ.

ಟ್ವೀಟ್​ನಲ್ಲಿ ಏನಿದೆ?

ಪ್ರೀತಿಯ ಪ್ರಜೆಗಳೇ, ಇದು ಭವಿಷ್ಯದ ಸಾಧ್ಯತೆ. ತನಾತನಿ ಸಂಸತ್ತು. ನಿಮಗಿದು ಒಪ್ಪಿಗೆಯೇ? #justasking ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು.

RELATED ARTICLES

Related Articles

TRENDING ARTICLES