Monday, December 23, 2024

ಕೈ ಕೈ ಮೀಲಾಯಿಸಿಕೊಂಡ ಶಿಕ್ಷಕ – ಗ್ರಾಪಂ ಸದಸ್ಯ

ತುಮಕೂರು : ಶಿಕ್ಷಕ ದಿನಾಚರಣೆ ದಿನವೇ ನಡುರಸ್ತೆಯಲ್ಲಿ ಬಡಿದಾಡಿಕೊಂಡ ಶಿಕ್ಷಕ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಘಟನೆ ಕೊರಟಗೆರೆ ತಾಲೂಕಿನ ಜಟ್ಟಿಅಗ್ರಹಾರ ಗ್ರಾಮದಲ್ಲಿ ನಡೆದಿದೆ.

ಸಾರ್ವಜನಿಕರ ತಂಗುದಾಣದ ನಿರ್ಮಾಣ ಮಾಡುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ. ಈ ವೇಳೆ ಶಿಕ್ಷಕ ರಾಜಶೇಖರ್ ಎಂಬುವವರು ನಮ್ಮ ಮನೆ ಪಕ್ಕ ತಂಗುದಾಣ ನಿರ್ಮಾಣ ಬೇಡ ಎಂದು ಕ್ಯಾತೆ ತೆಗೆದಿದ್ದರು. ಈ ಹಿನ್ನೆಲೆ ಸದಸ್ಯ ಮಂಜುನಾಥ  ನಾವು ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡೋದು ನಿಮ್ಮ ಜಾಗದಲ್ಲಿ ಅಲ್ಲ ಎಂದು ಗಲಾಟೆ ಮಾಡಿದರು .

ಇದನ್ನು ಓದಿ : ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ನಟ ರಕ್ಷಿತ್ ಶೆಟ್ಟಿ

ಆದರೆ ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ತಾರಕಕ್ಕೇರಿದ್ದು, ನಡುರಸ್ತೆಯಲ್ಲಿ ಇಬ್ಬರು ಬಡಿದಾಡಿಕೊಂಡಿದ್ದಾರೆ. ಈ ಇಬ್ಬರು ಸಹ ಗೌರವಾನ್ವಿತರಾಗಿದ್ದು, ನಡುರಸ್ತೆಯಲ್ಲಿ ಗಲಾಟೆ ಮಾಡಿಕೊಂಡು ಜನರು ನೋಡುವಂತೆ ಜಟಾಪಟಿಯಾಗಿ ಗಲಾಟೆ ಮಾಡಿಕೊಂಡಿದ್ದಾರೆ.

ಬಳಿಕ ಸುದ್ಧಿ ತಿಳಿಯುತ್ತಿದ್ದಂತೆ ಸದ್ಯ ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

RELATED ARTICLES

Related Articles

TRENDING ARTICLES