Sunday, September 8, 2024

ಪಾಕಿಸ್ತಾನವನ್ನು ಮಣಿಸಿ ಏಷ್ಯಾಕಪ್ ಹಾಕಿ ಫೈವ್ಸ್ ಪ್ರಶಸ್ತಿ ಗೆದ್ದ ಭಾರತ

ಒಮನ್​ : ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವ ಮೂಲಕ ಭಾರತ ತಂಡ ಪುರುಷರ ಏಷ್ಯಾಕಪ್​ ಹಾಕಿ ಫೈವ್ಸ್​ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಶನಿವಾರ ನಡೆದ ಫೈನಲ್​ ಪಂದ್ಯದ ಪೆನಾಲ್ಟಿ ಶೂಟೌಟ್​ನಲ್ಲಿ ಭಾರತ ತಂಡ 2-0 ಯಿಂದ ಪಾಕಿಸ್ತಾನ ತಂಡವನ್ನು ಮಣಿಸಿತು.

ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತದ ಹಾಕಿ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ (ಎಕ್ಸ್​) ನಲ್ಲಿ ಪೋಸ್ಟ್​ ಹಾಕುವ ಮೂಲಕ ತಂಡದ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನು ಓದಿ: Asia Cup 2023: ಇಂದು ಬಾಂಗ್ಲಾ-ಅಫ್ಘನ್ ಮುಖಾಮುಖಿ

ಮುಂದಿನ ವರ್ಷ ಜನವರಿಯಲ್ಲಿ ಮಸ್ಕತ್​ನಲ್ಲಿ ನಡೆಯಲಿರುವ ಹಾಕಿ ಫೈವ್ಸ್​ ವಿಶ್ವಕಪ್​ಗೂ ಭಾರತ ತಂಡ ಅರ್ಹತೆ ಸಂಪಾದಿಸಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರಶಸ್ತಿ ಸೆಣಸಾಟದಲ್ಲಿ ಪಂದ್ಯ ನಿಗದಿತ ಅವಧಿಯಲ್ಲಿ 4-4 ರಿಂದ ಸಮಬಲಗೊಂಡಿತು. ನಂತರ ಶೂಟೌಟ್​ನಲ್ಲಿ ಭಾರತ ತಂಡದ ಗೋಲು ಕೀಪರ್​ ಸೂರಜ್​ ಕರ್ಕೆರಾ ಪಾಕಿಸ್ತಾನದ ಎರಡು ಹೊಡೆತಗಳನ್ನು ತಡೆದು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಹಾಕಿ ಇಂಡಿಯಾ ತಂಡದ ಆಟಗಾರರಿಗೆ ತಲಾ 2 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1 ಲಕ್ಷ ರೂ. ಬಹುಮಾನ ಪ್ರಕಟಿಸಿದೆ. ಭಾರತ ತಂಡ ಈ ಮುನ್ನ ಶನಿವಾರ ಬೆಳಗ್ಗೆ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 10-4 ಅಂತರದಿಂದ ಗೆಲುವು ದಾಖಲಿಸಿ, ವಿಶ್ವಕಪ್​ ಪ್ರವೇಶವನ್ನೂ ಖಚಿತಪಡಿಸಿಕೊಂಡಿತ್ತು. ಕನ್ನಡಿಗ ಮೊಹಮದ್​ ರಾಹೀಲ್​ ಸೆಮೀಸ್​ನಲ್ಲೂ 4 ಗೋಲು ಸಿಡಿಸಿ ಮಿಂಚಿದ್ದರು.

RELATED ARTICLES

Related Articles

TRENDING ARTICLES