Wednesday, January 22, 2025

ಜಯನಗರ ಬಸ್ಟಾಂಡ್​ಗೆ ಸರ್ಪ್ರೈಸ್​​ ಎಂಟ್ರಿ ಕೊಟ್ಟ ಜೈಲರ್​ ರಜನಿ!​

ಬೆಂಗಳೂರು : ಸೂಪರ್​ ಸ್ಟಾರ್​ ರಜನೀಕಾಂತ್​ ಇಂದು ಬೆಂಗಳೂರಿನ ಸೀತಾಪತಿ ಅಗ್ರಹಾರದ ರಾಘವೇಂದ್ರ ಮಠಕ್ಕೆ ಭೇಟಿ ದಿಢೀರ್​​ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.

ತಮ್ಮ ಸ್ನೇಹಿತ ರಾಜ್​ ಬಹದ್ದೂರ್​ ಜೊತೆಯಾಗಿ ಇಂದು ರಾಯರ ಮಠಕ್ಕೆ ಭೇಟಿ ನೀಡಿದ ನಟ ಸೂಪರ್​ ಸ್ಟಾರ್ ರಜನೀಕಾಂತ್ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು  ಫಲಮಂತ್ರಾಕ್ಷತೆ ಸ್ವೀಕರಿಸಿದರು.

ಇತ್ತೀಚೆಗೆ ಬಿಡುಗಡೆಯಾದ ಜೈಲರ್​ ಸಿನಿಮಾ ಸಕ್ಸಸ್​ ಬೆನ್ನಲ್ಲೆ ಇಂದು ಬೆಂಗಳೂರಿನ ರಾಯರ ಮಠಕ್ಕೆ ಭೇಟಿನೀಡಿದ ರಜನಿಕಾಂತ್​ ಮತ್ತು ಸ್ನೇಹಿತರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರಾಯರ ಮಠ ಜಯನಗರದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬೇಟಿ ನೀಡಿ ಚಿಕ್ಕಂದಿನಲ್ಲಿ ಆಡಿ ಬೆಳೆದ ಅಗ್ರಹಾರದಲ್ಲಿ  ಕೆಲಕಾಲ ಸಮಯ ಕಳೆದಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳು ರಜನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ, ಇದೇ ವೇಳೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.

 

RELATED ARTICLES

Related Articles

TRENDING ARTICLES