Thursday, January 23, 2025

ಆರೈಕೆ ಸರಿಯಾಗಿ ಮಾಡು ಎಂದಿದ್ದಕ್ಕೆ ಶರ್ಟ್​ ಬಿಚ್ಚಿ ಅನುಚಿತ ವರ್ತನೆ ತೋರಿದ ವೈದ್ಯ!

ಗದಗ: ರೋಗಿಯ ಆರೈಕೆ ಸರಿಯಾಗಿ ಮಾಡದಿದ್ದರೇ ಸಚಿವರಿಗೆ ಕರೆ ಮಾಡುತ್ತೇನೇ ಎಂದಿದ್ದಕ್ಕೆ ರೋಗಿಯ ಸಂಬಂಧಿ ವಿರುದ್ದ ಸಿಟ್ಟಿಗೆದ್ದ ವೈದ್ಯ ತನ್ನ ಶರ್ಟ್​ ಬಟನ್​ ಬಿಚ್ಚಿ ಅನುಚಿತವಾಗಿ ವರ್ತನೆ ಮಾಡಿರುವ ಘಟನೆ ಗದಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ,

ಡಾ.ಗೌತಮ್​ ವೈದ್ಯ ಅನುಚಿತವಾಗಿ ವರ್ತಿಸಿದ ವೈದ್ಯ. ಮುಸ್ತಾಕ್​ ತನ್ನ ಪತ್ನಿಯನ್ನು ಹೆರಿಗೆಗಾಗಿ ಗದಗ ಜಿಮ್ಸ್​ ಆಸ್ಪತ್ರೆ ದಾಖಲಿಸಿದ್ದ ಈ ವೇಳೆ ಗರ್ಭಿಣಿಯನ್ನು ನೋಡಲು ಬಂದಿದ್ದ ಮುಸ್ತಾಕ್​ ಸಂಬಂಧಿ ಗರ್ಭಿಣಿ ಆರೈಕೆ ಸರಿಯಾಗಿ ಮಾಡದಿದ್ದರೇ ಸಚಿವರಿಗೆ ಕರೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ಇದನ್ನು ಓದಿ: ಚಂದ್ರನ ಮೇಲ್ಮೈಗೆ ಹೆಸರಿಡುವ ಹಕ್ಕನ್ನು ಮೋದಿಗೆ ಕಟ್ಟವರು ಯಾರು?: ರಶೀದ್​ ಅಲ್ವಿ

ಇದಕ್ಕೆ ಸಿಟ್ಟಿಗೆದ್ದ ವೈದ್ಯ ಗೌತಮ್​, ಯಾರಿಗೆ ಕಾಲ್‌ ಮಾಡ್ತೀಯಾ ಮಾಡು, ಆಡ್ರೆಸ್ ಬರೆದು ಕೋ, ಲೈವ್ ಮಾಡು ಅಂತ ಹೇಳಿ ಶರ್ಟ್ ಬಟನ್‌ ಬಿಚ್ಚಿ ಆವಾಜ್​ ಹಾಕಿದ್ದಾನೆ ಈ ರೀತಿ ರೋಗಿಗಳು ಮತ್ತು ಅವರು ಸಂಬಂಧಿಗಳ ವಿರುದ್ದ ಎಗರಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವೀಡಿಯೋ ವೈರಲ್​ ಆಗುತ್ತಿದ್ದಂತೆ ವೈದ್ಯನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಗದಗದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಸಚಿವ ಶರಣ ಪ್ರಕಾಶ್​ ಪಾಟೀಲ್ ಈ ಘಟನೆ ಸಂಬಂಧ ಯಾವುದೇ ಮಾಹಿತಿ ನನ್ನ ಗಮನಕ್ಕೆ ಬಂದಿಲ್ಲ, ರೋಗಿಗಳ ಜೊತೆ ಈ ರೀತಿಯ ವರ್ತನೆ ಸರಿಯಲ್ಲ ಈ ಬಗ್ಗೆ ಮಾಹಿತಿ ಪಡೆದು ಕ್ರಮಕೈಗೊಳ್ಳುತ್ತೇವೆ ಎಂದರು.

ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು ಅವರ ಜೊತೆ ವೈದ್ಯರು ಒಳ್ಳೆಯ ವ್ಯವಹಾರ, ವರ್ತನೆ ತೋರಬೇಕು. ಮುಂದೆ ಈ ರೀತಿ ಘಟನೆಯಾಗದಂತೆ ನೋಡಿಕೊಳ್ತೇವೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES