Thursday, January 23, 2025

ಪತ್ನಿ ಸ್ಪಂದನ ನಿಧನದ ಬಳಿಕ ಸಿನಿಮಾ ಪ್ರಮೋಷನ್​ನಲ್ಲಿ ಚಿನ್ನಾರಿ ಮುತ್ತ ಭಾಗಿ

ಬೆಂಗಳೂರು : ನಟ ವಿಜಯ್ ರಾಘವೇಂದ್ರ ಅವರು ನಟಿಸಿರುವ ಚಿತ್ರದ ಟ್ರೈಲರ್ ಬಿಡುಗಡೆಗೆ ಮಾಡಲು ಪತ್ನಿ ಅಗಲಿಕೆಯ ಬಳಿಕ ಮೊದಲ ಬಾರಿ ಹೊರಬಂದ ಚಿನ್ನಾರಿ ಮುತ್ತ.

ಸುಹಾಸ್ ಕೃಷ್ಣ ನಿರ್ದೇಶನ ಮಾಡಿರುವ ‘ಕದ್ದ ಚಿತ್ರ’ ಸಿನಿಮಾ ಆಗಸ್ಟ್ 25 ರಂದು ರಿಲೀಸ್ ಆಗಬೇಕಿತ್ತು. ಆದರೆ ಪತ್ನಿ ಸ್ಪದಂನ ಅವರ ಅಗಲಿಕೆಯಿಂದ ಬಿಡುಗಡೆಯನ್ನು ಮುಂದಾಡಲಾಗಿತ್ತು. ಆದರೆ ಇಂದು ಲುಲು ಮಾಲ್ ಆವರಣದಲ್ಲಿ ‘ಕದ್ದ ಚಿತ್ರ’ ಟ್ರೈಲರ್ ಲಾಂಚ್ ಫಂಕ್ಷನ್ ನಡೆಯಲಿದ್ದು, ಟ್ರೈಲರ್ ಲಾಂಚ್​ಗೆ ಸಕಲ ಸಿದ್ಧತೆ ನಡೆದಿದೆ.

ಈ ಹಿನ್ನೆಲೆ ಸ್ಪಂದನಾ ನಿಧನದ ಬಳಿಕ ವಿಜಯ್ ರಾಘವೇಂದ್ರ ಅವರು ಮೊದಲ ಸಲ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನು ಓದಿ : ಯುವತಿಗೆ ಬಹಿರಂಗವಾಗಿ ಕ್ಷಮೇ ಕೇಳಿದ ನಿರ್ದೇಶಕ ರಾಜ್​ ಬಿ ಶೆಟ್ಟಿ 

ಅಷ್ಟೇ ಅಲ್ಲ ಇಂದು ಸ್ಪಂದನಾ- ವಿಜಯ್ ರಾಘವೇಂದ್ರ ಅವರ 16ನೇ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆ ಬೆಳಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನಾ ನೆನೆದು ಭಾವುಕವಾಗಿ ಪೋಸ್ಟ್ ಹಾಕಿದ್ದ ಚಿನ್ನಾರಿ ಮುತ್ತ.

RELATED ARTICLES

Related Articles

TRENDING ARTICLES