Friday, January 10, 2025

ಸಿಎಂ ರನ್ನು ಭೇಟಿಯಾದ ಖಜಾಕಿಸ್ತಾನದ ರಾಯಭಾರಿ ನುರ್ಲನ್  ಜಲ್ಗಾಸ್ಭಯೇವ್

ಬೆಂಗಳೂರು :  ಖಜಾಕಿಸ್ತಾನದ  ರಾಯಭಾರಿ ನುರ್ಲನ್  ಜಲ್ಗಾಸ್ಭಯೇವ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಏರೋಸ್ಪೇಸ್ ಟೆಕ್ನಾಲಜಿಯಲ್ಲಿ ಮುಂಚೂಣಿಯಲ್ಲಿರುವ  ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ನಾಳೆ ನಗರದಲ್ಲಿ ಮೋದಿ ರೋಡ್​ ಶೋ ರದ್ದು!

ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ  ಖಜಾಕಿಸ್ತಾನದ ಐಟಿ ಟೆಕ್ ಸಮ್ಮಿಟ್ ನಲ್ಲಿ ಸಚಿವರು ಭಾಗವಹಿಸುತ್ತಿದ್ದಾರೆ. ಈ ವೇಳೆ ಕಾನ್ಸುಲ್ ಜನರಲ್ ಕಚೇರಿಯನ್ನು ತೆರೆಯಲು ಪ್ರಸ್ತಾ ವನೆ ಸಲ್ಲಿಸಲಾಗಿದೆ ಎಂದು ರಾಯಭಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ಎಲ್ಲಾ ಸಹಕಾರವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

RELATED ARTICLES

Related Articles

TRENDING ARTICLES